ಕಾಪು ಬಿಜೆಪಿ ಗೆಲುವಿಗೆ ಗುರ್ಮೆ ಸುರೇಶ್ ಶೆಟ್ಟಿ ಪಣ.

Featured, ಉಡುಪಿ

ಕಾಪು ; ಕಾಪು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು, ಆದರೇ ಪಕ್ಷದ ನಿರ್ಧಾರವನ್ನ ಗೌರವಿಸಿ ಕಾಪು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಪರ ಮಿಂಚಿನ ಸಂಚಾರದ ಮತ ಯಾಚನೆಯಲ್ಲಿ ತೊಡಗಿದ್ದಾರೆ.ಕ್ಷೇತ್ರದ ವಿವಿಧ ಬೂತ್ ಗಳಿಗೆ ಭೇಟಿ ನೀಡಿ ಪಕ್ಷಕ್ಕೆ ನೂರಾರು ಕಾರ್ಯಕರ್ತರನ್ನ ಸೇರ್ಪಡಿಸಿ ಯುವಕರಲ್ಲಿ ಬಿಜೆಪಿಯ ಹೊಸ ಹುರುಪನ್ನ ಮೂಡಿಸುತ್ತಿದ್ದಾರೆ.ಕ್ಷೇತ್ರದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿಯನ್ನ ಹಿಡಿಯಬೇಕೆಂಬ ಮಹದಾಸೆಯಿಂದ ಹಗಲಿರುಳು ಮತ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದು ಗೆಲುವು ಸಾಧಿಸುವ ಭರವಸೆಯಲಿದ್ದಾರೆ.