ಬಿಜೆಪಿ ಯುವಕರ ಕಾಂಗ್ರೆಸ್ ಸೇರ್ಪಡೆ

ಉಡುಪಿ

ಕಾಪು : ಬೆಳಪು ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಪು ಕ್ಷೇತ್ರದ ಉಚ್ಚಿಲ ಬಡಾ ಗ್ರಾಮದ ಬಿ.ಜೆ.ಪಿ ಪಕ್ಷದ ಹಲವಾರು ಯುವ ಮೊಗವೀರ ಮುಖಂಡರು ಗಳಾದ, ಅಮಿತ್ ಕುಮಾರ್, ವಸಂತ್ ಕುಮಾರ್, ನಿಶಾಂತ್, ನಿಹಲ್,ಪವನ್,ದೀಕ್ಷಿತ್, ವಿಶ್ವಾಸ್, ಉಲ್ಲಾಸ್,ಇಂದು ಬಿ.ಜೆ.ಪಿ ಪಕ್ಷ ತೊರೆದು ಡಾ|| ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ವಿನಯ್ ಕುಮಾರ್ ಸೊರಕೆಯವರ ಉಪಸ್ಥಿತಿ ಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು..ಈ ಸಂಧರ್ಭದಲ್ಲಿ ಎಂ.ಎ ಗಫುರ್,ಯು.ಆರ್ ಸಭಾಪತಿ,ಬ್ಲಾಕ್ ಅಧ್ಯಕ್ಷ ರಾದ ನವೀನ್ ಚಂದ್ರ ಶೆಟ್ಟಿ ,ಕಾಪು ದಿವಾಕರ್ ಶೆಟ್ಟಿ, ದಿನೇಶ್ ಕೋಟ್ಯಾನ್, ವಿಶ್ವಾಸ್ ಅಮೀನ್, ಪಂಚಾಯತ್ ಸದಸ್ಯರು,ಅಭಿಮಾನಿಗಳು ಉಪಸ್ಥಿತರಿದ್ದರು.