ಕಾಪು : ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಬೇಗ ಮುಗಿಸಿ-ಇಲ್ಲವೇ ಹೋರಾಟ ಎದುರಿಸಿ :-ಸಂಬಂಧಪಟ್ಟಇಲಾಖೆಗೆ ವಾರ್ನಿಂಗ್ ನೀಡಿದ JDS ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ – Vishwanews24

Featured, ಉಡುಪಿ

ಕಾಪು : ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಬೇಗ ಮುಗಿಸಿ-ಇಲ್ಲವೇ ಹೋರಾಟ ಎದುರಿಸಿ :-ಸಂಬಂಧಪಟ್ಟಇಲಾಖೆಗೆ ವಾರ್ನಿಂಗ್ ನೀಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ

ಉಡುಪಿ ಜಿಲ್ಲೆಯ ಕಾಪು ನಗರದ ಮೇಲ್ ಸೇತುವೆ  ರಾಷ್ಟ್ರೀಯ ಹೆದ್ದಾರಿ:66ರ ಕಾಮಗಾರಿಯು ಸ್ವಲ್ಪ ದಿನ ನಡೆದು  ಒಂದು ತಿಂಗಳಿಂದ ಕಾಮಗಾರಿ ನಡೆಯದೆ  ಇದ್ದು ವಿಳಂಬದಿಂದಾಗಿ, ಉಡುಪಿ ಕಡೆ ಸಂಚರಿಸುವ ವಾಹನಗಳು  ಕಾಪು ಹೊಸ ಮಾರಿ ಗುಡಿಯ  ದೇವಸ್ಥಾನದ ಎದುರು ಸರ್ವಿಸ್ ರಸ್ತೆಯಲ್ಲಿ ಉಡುಪಿ ಕಡೆ ಸಂಚರಿಸುತ್ತಿದ್ದು,ಹಲವಾರು ಅಪಘಾತಗಳಿಗೆ ಕಾರಣವಾಗಿರುತ್ತದೆ, ಈ ಸರ್ವಿಸ್ ರಸ್ತೆ ಮುಕೇನ ಪಶ್ಚಿಮ ದಿಕ್ಕಿನ, ಮೂಲಕ ಕಾಪು ಬೀಚಿಗೆ ಹೋಗುವ  ಮತ್ತು ಸ್ಥಳೀಯ ನಿವಾಸಿಗಳಿಗೆ ವಾಹನ ದಟ್ಟಣೆಯಿಂದ ಸಂಚರಿಸಲು  ಅನಾನುಕೂಲವಾಗಿರುತ್ತದೆ ಮತ್ತು ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿರುತ್ತದೆ.
ಸಂಬಂಧಪಟ್ಟವರು ಕೂಡಲೇ ಹೈವೆಯ  ಮೇಲ್ ಸೇತುವೆ   ಕಾಮಗಾರಿಯನ್ನು ತುತ್ತಾಗಿ ನಿರ್ವಹಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು  ಹಾಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸುತ್ತಿದ್ದೇವೆ. ಇಲ್ಲವಾದರೆ  ಕಾಪು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ವತಿಯಿಂದ ರಸ್ತೆ ಕಾಮಗಾರಿ ಶೀಘ್ರವಾಗಿ ಆಗುವ ಬಗ್ಗೆ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಸಂಬಂಧಪಟ್ಟವರನ್ನು ಎಚ್ಚರಿಸಿರುತ್ತಾರೆ.
Join our Whatsapp group by clicking the below link 👇👇

Leave a Reply