ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ವಿಶೇಷ ಲಕ್ಷಪುಷ್ಪಾರ್ಚನೆ – vishwanews24
ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ
135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ
ಕಾಪು : ಮಲ್ಲಿಗೆ ಪ್ರಿಯೆ ಮಹಾದೇವಿ ಎಂದೇ ಪ್ರಸಿದ್ದಿಯಾದ ಕಾಪು ಶ್ರೀ ಹಳೇ ಮಾರಿಯಮ ದೇವಿಯ ಸನ್ನಿಧಾನದಲ್ಲಿ ಪವಿತ್ರ ಅಧಿಕ ಜೇಷ್ಠ ಮಾಸ ಪ್ರಯುಕ್ತ ಮೇ 26ರಂದು ಲೋಕ ಕಲ್ಯಾಣಾರ್ಥ ವಿಶೇಷ ಲಕ್ಷ ಪುಷ್ಪಾರ್ಚನೆ ಸಮರ್ಪಣೆ ನಡೆಯಿತು.
ಪ್ರಧಾನ ಅರ್ಚಕ ವೇ। ಮೂ ಕಮಲಾಕ್ಷ ಭಟ್ ಮತ್ತು ಅರ್ಚಕ ವೇ ಮೂ। ಶ್ರೀನಿವಾಸ ಭಟ್ ನೇತೃತ್ವದಲ್ಲಿ ಭಕ್ತರಿಂದ ಸಮರ್ಪಣೆಗೊಂಡ ಕೆಂಪು ಕೇಪುಳ ಹೂ ಮತ್ತು ಮಲ್ಲಿಗೆ ಹೂವಿನ ಅರ್ಚನೆ ನಡೆಸಿ, ಬಳಿಕ 1 ಸಾವಿರಕ್ಕೂ ಅಧಿಕ ಚೆಂಡು ಮಲ್ಲಿಗೆಯನ್ನು ಅಲಂಕಾರಕ್ಕೆ ಸಮರ್ಪಿಸಲಾಯಿತು.
ಇದನ್ನೂ ಓದಿ:
ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24
ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ 2 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. 400ಕ್ಕೂ ಅಧಿಕ ಮಂದಿ ಲಕ್ಷ ಪುಷ್ಪಾರ್ಚನೆ ಸೇವೆಯನ್ನು ಸಮರ್ಪಿಸಿದರು.
ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತಸರ ಪ್ರಸಾದ್ ಜಿ. ಶೆಣೈ, ಮೊತ್ತೇಸರರಾದ ರಾಜೇಶ್ ಶೆಣೈ, ರಾಮ್ ನಾಯಕ್, ಸದಾಶಿವ ಕಾಮತ್, ಶ್ರೀಕಾಂತ್ ಭಟ್, ಕಮಿಟಿ ಸದಸ್ಯರಾದ ಚಂದ್ರಕಾಂತ್ ಕಾಮತ್, ಕೃಷ್ಣಾನಂದ ನಾಯಕ್, ಮೋಹನದಾಸ್ ಕಿಣಿ, ರಾಜೇಶ್ ಶೆಣೈ ಮಜೂರು, ಮಾಜಿ ಆಡಳಿತ ಮೊತ್ತೇಸರ ಶ್ರೀಧರ ಶೆಣೈ, ಮಾಜಿ ಮೊತ್ತೇಸರ ರಮೇಶ್ ಪೈ, ಕಾಪು ಪೇಟೆಯ ಹತ್ತು ಸಮಸ್ತರು ಹಾಗೂ ಭಕ್ತರು ಪಾಲ್ಗೊಂಡಿರು.
ಇದನ್ನೂ ಓದಿ:
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ – vishwanews24
