ಕಾಪು : ಹೆಜಮಾಡಿ ಪಕ್ಷೇತರ ಸದಸ್ಯ ರೋಶನ್ ನೇತ್ರತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಸೇರ್ಪಡೆ – Vishwanews24
ಕಾಪು : ಹೆಜಮಾಡಿ ಪಕ್ಷೇತರ ಸದಸ್ಯ ರೋಶನ್ ನೇತ್ರತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಸೇರ್ಪಡೆ
ಉಡುಪಿ: ಯುವ ನಾಯಕ ಮೊಗವೀರ ಮುಂದಾಳು ಹೆಜಮಾಡಿ ಗ್ರಾಮ ಪಂಚಾಯತ್ ಪಕ್ಷೇತರ ಸದಸ್ಯ ರೋಶನ್ ನೇತ್ರತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಗೆ ಸೇರ್ಪಡೆ ಯಾಗಿದ್ದಾರೆ.
ಕಾಪು ರಾಜೀವ ಭವನದಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ಯಾವುದೇ ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕ ರಾಜಕಾರಣಿ ವಿನಯ ಕುಮಾರ್ ಸೊರಕೆಯವರ ವ್ಯಕ್ತಿತ್ವಕ್ಜೆ ಮನಸೋತು ಕಾಂಗ್ರೆಸ್ ಸೇರ್ಪಡೆಯಾಗ್ತಿದ್ದೀವಿ.
ರಾಜ್ಯದಲ್ಲಿ ಶೇಕಡ 40 ಸರ್ಕಾರ ಇದ್ರೆ ಬಿಜೆಪಿ ನೇತ್ರತ್ವದ ಹೆಜಮಾಡಿ ಪಂಚಾಯತ್ ನಲ್ಲಿ ಶೇಕಡಾ 20 ಕಮಿಷನ್ ಸರ್ಕಾರದ ಆಡಳಿತ ನಡೀತಾ ಇದೆ ಎಂದರು.
ನಾಳೆ ಮಂಗಳೂರಿಗೆ ಪ್ರಧಾನಿ : ಮೂಲ್ಕಿಯಲ್ಲಿ ಬೃಹತ್ ಸಮಾವೇಶ – Vishwanews24
ಸಮಾಜಮುಖಿ ಕಾರ್ಯಕರ್ತೆ ಫರ್ಜಾನ ಕಾಪು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮಾತನಾಡಿ ಯುವ ಶಕ್ತಿಯ ಸದ್ಭಳಕೆಯಾಗಬೇಕು.ಯುವಶಕ್ತಿ ಹೆಚ್ಚು ಕೆಲಸ ಮಾಡಿದಷ್ಟು ಗೆಲುವಿನ ವೇಗ ಜಾಸ್ತಿಯಾಗುತ್ತದೆ ಎಂದರು.

