ಕಾರ್ಕಳ : ಕಾಂಗ್ರೆಸ್ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಬೃಹತ್ ಕಾಲ್ನಡಿಗೆ ಜಾಥ ಹಾಗೂ ಬಹಿರಂಗ ಸಭೆ – Vishwanews24

Featured, ಉಡುಪಿ

ಕಾರ್ಕಳ : ಕಾಂಗ್ರೆಸ್ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಬೃಹತ್ ಕಾಲ್ನಡಿಗೆ ಜಾಥ ಹಾಗೂ ಬಹಿರಂಗ ಸಭೆ

ಕಾರ್ಕಳ: ವಿಧಾನಸಭಾ ಚುನಾವಣೆಯ ಅಂಗವಾಗಿ ಮೇ೧ ರಂದು ಕಾಂಗ್ರೆಸ್ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದರು.

ಸ್ವರಾಜ್ ಮೈದಾನದಿಂದ ಬಂಡೀಮಠ ಬಸ್ ನಿಲ್ದಾಣ ಮೆರವಣಿಗೆಯೂ ನಡೆದಿತ್ತು. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಚೆಂಡೆ, ಹುಲಿವೇಷ ಹಾಗೂ ಡಿಜೆ ಸೌಂಡ್ ಮೆರವಣಿಗೆ ನಡೆಯಿತು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಳ ಉದಯಕುಮಾರ್ ಶೆಟ್ಟಿ ಪರ ಘೋಷಣೆಗಳು ಮುಗಿಲು ಮುಟ್ಟಿತ್ತು.ಹಾಗೂ ಪಕ್ಷದ ರಾಜ್ಯ ಮತ್ತು ರಾಷ್ಟçಮಟ್ಟದ ಮುಖಂಡರ ಭಾವಚಿತ್ರಗಳು ಜಾಥದಲ್ಲಿ ಅಡಕವಾಗಿತ್ತು.

ಕಾಪು  : ಹೆಜಮಾಡಿ ಪಕ್ಷೇತರ ಸದಸ್ಯ ರೋಶನ್ ನೇತ್ರತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್  ಸೇರ್ಪಡೆ – Vishwanews24

ಕಾಲ್ನಡಿಗೆಯು ಅನಂತಶಯನ ದೇವಸ್ಥಾನ ತಲುಪುತ್ತಿದ್ದಂತೆ ಹಲವು ಹಿರಿಯರು ನಾಗರಿಕರು ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಆಶೀರ್ವಾದ ನೀಡಿದರು.

ಗ್ರಾಮೀಣ ಪ್ರದೇಶಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಅಗಮಿಸಿದರು

Leave a Reply