ಫೆಬ್ರವರಿ 6 ರಂದು ಶ್ರೀ ನಾಗಬ್ರಹ್ಮ ಮಂತ್ರದೇವತೆ ದೈವಸ್ಥಾನ ಸೊರ್ಪು ಶಿರ್ವ- ವಾರ್ಷಿಕ ನೇಮೋತ್ಸವ.vishwanews24
ಫೆಬ್ರವರಿ 6 ರಂದು ಶ್ರೀ ನಾಗಬ್ರಹ್ಮ ಮಂತ್ರದೇವತೆ ದೈವಸ್ಥಾನ ಸೊರ್ಪು ಶಿರ್ವ- ವಾರ್ಷಿಕ ನೇಮೋತ್ಸವ.
ಕಾಪು: ತುಳುನಾಡಿನ ಕಾರಣಿಕ ದೈವಸ್ಥಾನ ಹಾಗೂ ಸಾವಿರಾರು ಭಕ್ತರ ಇಷ್ಟಾರ್ಥ ನೇರೆವೆರಿಸಿಕೊಟ್ಟ ಕಾಪು ತಾಲೂಕಿ ಶಿರ್ವ ಗ್ರಾಮದ ಸೊರ್ಪುವಿನ ಅಣ್ಣಪ್ಪ ಸ್ವಾಮಿ ನಿಲಯದಲ್ಲಿ ನೆಲೆಯಾದ ತಾಯಿ ಮಂತ್ರದೇವತೆ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮ ಫೆಬ್ರವರಿ 5 ರಿಂದ ಮೊದಲ್ಗೊಂಡು ಫೆಬ್ರವರಿ 7 ರ ವರೆಗೆ ನಡೆಯಲಿದೆ.
ದಿನಾಂಕ 5 ಫೆಬ್ರವರಿ ಶುಕ್ರವಾರ ಗಣಹೋಮ,ಆಶ್ಲೇಷಾ ಬಲಿ,ಸತ್ಯನಾರಾಯಣ ಪೂಜೆ,ಶನಿಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ದಿನಾಂಕ 6 ಫೆಬ್ರವರಿಯ ಶನಿವಾರ ನೇಮೋತ್ಸವದ ಪ್ರಯುಕ್ತ ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ಸಂಜೆ ಗಂಟೆ 5 ರಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಕಾರಣಿಕ ಸತ್ಯ ಮಂತ್ರದೇವತೆ ಅಮ್ಮನ ನೇಮೋತ್ಸವ ಜರಗಲಿರುವುದು.
ಫೆಬ್ರವರಿ 7 ಆದಿತ್ಯವಾರ ಬೆಳಿಗ್ಗೆ 6 ಕ್ಕೆ ಕೊರಗಜ್ಜ ಹಾಗೂ ದೈವರಾಜ ಗುಳಿಗ ದೈವದ ನೇಮೋತ್ಸವ ಮತ್ತು ಸಂಜೆ 6 ಗಂಟೆಗೆ ಅಗೆಲು ಸೇವೆ ನಡೆಯಲಿದೆ ಎಂದು ಕ್ಷೇತ್ರದ ಅರ್ಚಕರಾದ ರಮೇಶ್ ಪಾತ್ರಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
