ಜನಸಾಮಾನ್ಯರು ಬದುಕಬೇಕಾದರೆ ಕಾಪುವಿಗೆ ಸೊರಕೆ ಅಗತ್ಯ ಮತ್ತು ಅನಿವಾರ್ಯ: ಉದ್ಯಮಿ ದೀಪಕ್ ಶೆಟ್ಟಿ : vishwanews24

Featured, ಉಡುಪಿ

ಜನಸಾಮಾನ್ಯರು ಬದುಕಬೇಕಾದರೆ ಕಾಪುವಿಗೆ ಸೊರಕೆ ಅಗತ್ಯ ಮತ್ತು ಅನಿವಾರ್ಯ
ವಿನಯ ಕುಮಾರ್ ಸೊರಕೆ ಋಣ ನಮ್ಮ ಮೇಲಿದೆ…: ಉದ್ಯಮಿ ದೀಪಕ್ ಶೆಟ್ಟಿ

ಕಾಪು: ಕಾಪು ವಿಧಾನಸಭಾ ಕ್ಷೇತ್ರ ಅಭಿವೃದ್ದಿಯಾಗಿದ್ದರೆ ಅದು ಕೇವಲ ವಿನಯ ಕುಮಾರ್ ಸೊರಕೆಯ ಅವಧಿಯಲ್ಲಿ ಎಂಬುದು ಸತ್ಯ ವಿಚಾರ ಆದರೇ ಎಂದಿಗೂ ಬಿಜೆಪಿಯ ಮಾಜಿ ಶಾಸಕರಂತೆ ದ್ವೇಷ ರಾಜಕಾರಣ ಮಾಡಿಲ್ಲ, ಜಾತಿ ಧರ್ಮ ನೋಡಿ ಕೆಲಸ ಮಾಡಿಲ್ಲ ಅರ್ಜಿ ಕೊಟ್ಟ ಎರಡು ದಿನದಲ್ಲಿ ನಮ್ಮ ಊರಿಗೆ ರಸ್ತೆ ನೀರು ದಾರಿದೀಪದ ವ್ಯವಸ್ಥೆಯಾಗಿದ್ದರೆ ಅದು ಸೊರಕೆಯಿಂದಾಗಿದೆ ಎಂದು ಮತಯಾಚನೆಯ ಸಮಯದಲ್ಲಿ ಮತದಾರರೊಬ್ಬರಾದ ಉದ್ಯಮಿ ದೀಪಕ್ ಶೆಟ್ಟಿ ಹೇಳಿದರು.
ನಾನು ೧೫ ದಿನದ ರಜೆಯನ್ನು ಚುನಾವಣೆಗಾಗಿ ಮಾಡಿ ಬಂದಿದ್ದೇನೆ ಕಾರಣ ವಿನಯ ಕುಮಾರ್ ಸೊರಕೆ ಋಣ ನಮ್ಮ ಮೇಲಿದೆ ಹಿರಿಯ ಜೀವಿಗಳಿರುವ ನಮ್ಮೂರಿನ ಅಭಿವೃದ್ದಿ ಮಾಡಿದವರು ಇವರು ಹಾಗಾಗಿ ಈ ಬಾರಿ ಮತದಾನ ಮಾಡಿಯೇ ವಾಪಸ್ಸು ಹೊರಡಲಿದ್ದೇನೆ ಎಂದು ಅವರು ತಿಳಿಸಿದರು.
ಕಾಪು ಕ್ಷೇತ್ರದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಲಂಚದ ಭಾಧೆಯಿಲ್ಲದೆ,ಅದಿಕಾರಿಗಳ ಕಿರುಕುಳವಿಲ್ಲದೆ ಬದುಕಬೇಕಾದರೆ ಸೊರಕೆ ಗೆಲ್ಲಬೇಕು ಎಂಬುದು ಸರ್ವಾ ಜನಾಂಗದ ಆಶಯ” ವಾಗಿದೆಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾಪುವಿನಲ್ಲಿ ಸೊರಕೆ ಗೆದ್ದರೆ ಮಾನವೀಯತೆ – ಜಾತ್ಯತೀತತೆ ಗೆದ್ದಂತೆ : ಸುಧೀರ್ ಕುಮಾರ್ – Vishwanews24

Leave a Reply