ಜಿಲ್ಲೆಯಲ್ಲಿ ತಂಗುವ ವಿದೇಶಿಗರ ಮಾಹಿತಿ 24 ಗಂಟೆಯೊಳಗೆ ನೀಡುವುದು ಕಡ್ಡಾಯ  : ಉಡುಪಿ ಜಿಲ್ಲಾ ಪೊಲೀಸ್ – Vishwanews24

Featured, ಉಡುಪಿ

ಜಿಲ್ಲೆಯಲ್ಲಿ ತಂಗುವ ವಿದೇಶಿಗರ ಮಾಹಿತಿ 24 ಗಂಟೆಯೊಳಗೆ ನೀಡುವುದು ಕಡ್ಡಾಯ  : ಉಡುಪಿ ಜಿಲ್ಲಾ ಪೊಲೀಸ್

ಉಡುಪಿ: ವಿದೇಶೀಯರ ಕಾಯ್ದೆ 1911ರ ಕಲಂ, 7 ರಂತೆ ಯಾವುದೇ ವಿದೇಶಿಯರು ತಂಗುವ ಸ್ಥಳಗಳಾದ ಹೊಟೇಲ್‌ ಗೆಸ್ಟ್ ಹೌಸ್ ಧರ್ಮಶಾಲಾ/ಪತ್ಯೇಕ ಮನೆ/ಯುನಿವರ್ಸಿಟಿ ವಿದ್ಯಾ ಸಂಸ್ಥೆ/ಇತರೆ ಸ್ಥಳಗಳಲ್ಲಿ ವಿದೇಶಿಯರು ತಂಗಿದ ಬಗ್ಗೆ ಮಾಹಿತಿಯನ್ನು ಫಾರ್ಮ್ “ಸಿ” ಯನ್ನು ಸಂಬಂಧಪಟ್ಟ ಮಾಲೀಕರು ನೋಂದಣಿ ಅಧಿಕಾರಿಗಳಿಗೆ ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಆಧೀಕ್ಷಕರು) 24 ಗಂಟೆಯೊಳಗೆ ನೀಡುವುದು ಕಡ್ಡಾಯವಾಗಿರುತ್ತದೆ.

1) ಸದ್ರಿ ನಿಬಂದನೆಯ ಉಲ್ಲಂಘನೆಯಾದಲ್ಲಿ ಸಂಬಂದಪಟ್ಟವರ ವಿರುದ್ಧ ಕಲಂ 14 ವಿದೇಶಿಯರ ಕಾಯ್ದೆ 1946 ರಂತೆ ಕ್ರಮ ಜರುಗಿಸಬಹುದಾಗಿದೆ. ಸದ್ರಿ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ.

2) https://indianfrro.gov.in/frrg/Form ಲಿಂಕ್ ಮೂಲಕ ನೊಂದಣಿ ಮಾಡಬಹುದಾಗಿದೆ.

3) ಫಾರ್ಮ ” ಅನ್ನೋ ನಲ್ಲಿ ಭರ್ತಿಗೊಳಿಸುವುದು ಖಡ್ಡಾಯವಾಗಿ ಹೋಟೆಲ್ ಗೆಸ್ಟ್ ಹೌಸ್ ಧರ್ಮಶಾಲಾ ಪ್ರತ್ಯೇಕ ಮನೆ/ ಯುನಿವರ್ಸಿಟಿ ವಿದ್ಯಾ ಸಂಸ್ಥೆ ಇತರ ಸ್ಥಳಗಳ ಮಾಲಿಕರ ಜವಾಬ್ದಾರಿಯಾಗಿರುತ್ತದೆ, ವಿದೇಶಿಯರಿಗೆ ಫಾರ್ಮ್ ‘ಸಿ’ ಭರ್ತಿ ಗೊಳಿಸುವ ಅವಕಾಶವಿರುವುದಿಲ್ಲ.

ಉಡುಪಿ: ಯುವತಿ ನಾಪತ್ತೆ – Vishwanews24

4) ಪ್ರತ್ಯೇಕ ಮನೆಯ ಮಾಲೀಕರಿಗೆ ಓ.ಟಿ.ಪಿ ಮೂಲಕ ಸ್ವಯಂ ನೋಂದಣಿಗೆ ಅವಕಾಶವಿರುತ್ತದೆ. ಆನೈನ್ ನಲ್ಲಿ ಭರ್ತಿಗೊಳಿಸುವ ಸಂಭಂಧ ತಾಂತ್ರಿಕ ಕಾರಣಗಳಿಗೆ ಮೊಜಿಲ್ಲಾ ಪೈರ್ಫಾಕ್ಸ್ ಉಪಯೋಗಿಸುವುದು.

ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಕಲಸ ಕೊಡಿಸುವುದಾಗಿ ನಂಬಿಸಿ, ಮುಂಗಡವಾಗಿ ಹಣ ಪಡೆದು ವಿದೇಶಕ್ಕೆ ತೆರಳಿದ ನಂತರ ಸರಿಯಾದ ಕೆಲಸವಿಲ್ಲದೆ, ಹಣ ಹಾಗೂ ಕೆಲಸವನ್ನು ಕಳೆದುಕೊಂಡು ವಂಚನೆಗೊಳಗಾದ ಉದಾಹರಣೆಗಳು ಕಂಡುಬಂದಿರುತ್ತದೆ. ಆದುದರಿಂದ ನಾಗರೀಕರು ಜಾಗರುಕತೆಯಿಂದ ಅನಧಿಕೃತ ಎಜೆಂಟರನ್ನು ಸಂಪರ್ಕಿಸದೆ ಮಿನಿಸ್ಟ್ರೀ ಆಫ್ ಎಕ್ಸ್ಟರ್ ನಲ್ ಎಫೇರ್ಸ್ ನೊಂದಿಗೆ ನೋಂದಾಯಿತ ಎಜೆಂಟರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಜಿಲ್ಲೆಯಲ್ಲಿ ಅಧಿಕೃತವಾಗಿ ನೊಂದಾಯಿತರ ಮಾಹಿತಿಯನ್ನು https://www.emigrants.gov.in ನಿಂದ ಪಡೆದುಕೊಳ್ಳಬಹುದಾಗಿದೆ

ಹೊಸ ಅಥವಾ ನವೀಕೃತ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವ ಬಗ್ಗೆ ಸ್ಥಳೀಯ ಅಧೀಕೃತ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು (ಬೃಹ್ಮಾವರ ಮಂಗಳೂರು) ಸಂಪರ್ಕಿಸಿ ಸರಿಯಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಪ್ರಕಟಣೆಯಂತ ಯಾವುದೇ ಅಧಿಕೃತ ನೋಂದಾಯಿತ ಎಜೆಂಟ್ ಗಳು ಇರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು https://www.passportindia.gov.in ನಲ್ಲಿ ಪಡೆದುಕೊಳ್ಳುಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ಪಾಸ್ ಪೋರ್ಟ್ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಪಡೆಯಲು ಸಹಕರಿಸುವ ಎಜೆಂಟ್ ಹಾಗೂ ಅರ್ಜಿದಾರರು ಪತ್ತೆಯಾದಲ್ಲಿ ಅವರ ವಿರುದ್ದ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ದೇವತಾ ದರ್ಶನದಿಂದ ಮನೋಬಲವೃದ್ಧಿ : ನೋಡಿ ಇಂದಿನ ದಿನ ಭವಿಷ್ಯ -Vishwanews24 

Leave a Reply