ತಮಿಳುನಾಡು: ಮನೆಯಲ್ಲಿ ಫ್ರಿಡ್ಜ್ ಸ್ಪೋಟ : ಮೂವರು ಸಾವು, ಇಬ್ಬರಿಗೆ ಗಾಯ – Vishwanews24

Featured, ರಾಷ್ಟ್ರ ನ್ಯೂಸ್

ತಮಿಳುನಾಡು: ಮನೆಯಲ್ಲಿ ಫ್ರಿಡ್ಜ್ ಸ್ಪೋಟ : ಮೂವರು ಸಾವು, ಇಬ್ಬರಿಗೆ ಗಾಯ

ತಮಿಳುನಾಡು: ಮನೆಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಚೆಂಗಲ್‌ಪೇಟ್ ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ ನಡೆದಿದೆ.

ಗಿರಿಜಾ (63) , ಅವರ ಸಹೋದರಿ ರಾಧಾ (55), ಸಹೋದರ ರಾಜಕುಮಾರ್ (47) ಮೃತಪಟ್ಟವರು. ಗುಡುವಂಚೇರಿಯಲ್ಲಿರುವ ಆರ್‌ಆರ್ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿರುವ ದಿ. ವೆಂಕಟರಾಮನ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ.

ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನೂತನ ಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆ ಆಟದ ಆಮಂತ್ರಣ ಪತ್ರಿಕೆ ಬಿಡುಗಡೆ – Vishwanews24

ದುಬೈನಲ್ಲಿ ನೆಲೆಸಿರುವ ದಿ. ವೆಂಕಟರಾಮನ್ ಅವರ ಪತ್ನಿ ಗಿರಿಜಾ ಸಹಿತ ಕುಟುಂಬಿಕರು ದಿವಂಗತರಾದ ವೆಂಕಟರಾಮನ್ ಅವರ ವರ್ಷದ ಪೂಜೆ ಹಿನ್ನೆಲೆಯಲ್ಲಿ ಮನೆಗೆ ಆಗಮಿಸಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, ಗಾಯಾಳುಗಳಾದ ರಾಜ್‌ಕುಮಾರ್ ಅವರ ಪತ್ನಿ ಭಾರ್ಗವಿ (35) ಮತ್ತು ಅವರ ಪುತ್ರಿ ಆರಾಧನಾ (6) ಅವರನ್ನು ಕ್ರೋಂಪೇಟೆ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಪೋಟದ ಶಬ್ದ ಕೇಳಿ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ನವರು ಓಡಿ ಬಂದಿದ್ದು, ಬಾಗಿಲು ಒಡೆದು ಒಳ ಹೋಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.

ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ : ಸಿದ್ದರಾಮಯ್ಯ ಆಗ್ರಹ – Vishwanews24

Leave a Reply