ತಾಜ್ ಮಹಲ್ನಲ್ಲಿ ಬಾಂಬ್ ಇರುವುದಾಗಿ ಕರೆ : ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಪಡೆ -Vishwanews24
ತಾಜ್ ಮಹಲ್ನಲ್ಲಿ ಬಾಂಬ್ ಇರುವುದಾಗಿ ಕರೆ : ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಪಡೆ -Vishwanews24
ನವದೆಹಲಿ: ಪ್ರೇಮಸೌಧ ತಾಜ್ ಮಹಲ್ನಲ್ಲಿ ಬಾಂಬ್ ಇರುವುದಾಗಿ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ತಾಜ್ ಮಹಲ್ನಲ್ಲಿ ಬಾಂಬ್ ಇಟ್ಟಿರೋದಾಗಿ ಭದ್ರತಾ ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿರುವ ಭದ್ರತಾ ಸಿಬ್ಬಂದಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರವಾಸಿಗರು ಹಾಗೂ ತಾಜ್ ಮಹಲ್ನಲ್ಲಿರುವ ಸಿಬ್ಬಂದಿ ಸೇರಿ ಎಲ್ಲರನ್ನೂ ಹೊರಗಡೆ ಕಳುಹಿಸಿದ್ದಾರೆ.
ಜೊತೆಗೆ ತಾಜ್ ಮಹಲ್ನ ಎಲ್ಲಾ ದ್ವಾರಗಳನ್ನ ಬಂದ್ ಮಾಡಿ ಬಿಗಿಭದ್ರತೆ ನಿಯೋಜನೆಗೊಂಡಿದೆ. ತನಿಖೆಯನ್ನ ಮುಂದುವರಿಸಿರುವ ಅಧಿಕಾರಿಗಳು, ಓರ್ವ ಯುವಕನನ್ನ ಬಂಧಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ತನಿಖೆಯಲ್ಲಿ ಉದ್ಯೋಗ ಸಿಗದೇ ಖಿನ್ನತೆಗೆ ಒಳಗಾಗಿ ಈ ರೀತಿಯ ಕರೆ ಮಾಡಿದ್ದಾನೆ ಅಂತಾ ಹೇಳಲಾಗಿದೆ. ಆದರೆ ತನಿಖಾಧಿಕಾರಿಗಳು ತನಿಖೆಯನ್ನ ಮುಂದುವರಿಸಿದ್ದಾರೆ.
