ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ; 2 ಕೋಟಿ ರೂ ಜೀವನಾಂಶಕ್ಕೆ ಆದೇಶ -vishwanews24
ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ; 2 ಕೋಟಿ ರೂ ಜೀವನಾಂಶಕ್ಕೆ ಆದೇಶ
ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ. ಗುರುವಾರ (ಸೆ.03) ಕರ್ನಾಟಕ ಹೈಕೋರ್ಟ್ ವಿಚ್ಛೇದನ ನೀಡಿ ಅದೇಶಿಸಿದೆ.
ನ್ಯಾ.ಡಿ.ಕೆ.ಸಿಂಗ್ ಮತ್ತು ನ್ಯಾ.ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ಪೀಠವು ಆದೇಶ ನೀಡಿದೆ. ನಾಗರತ್ನ ಮತ್ತು ಮೂವರು ಮಕ್ಕಳ ಜೀವನವನ್ನು ಪರಿಗಣಿಸಿ, ವಿಜಯ್ ಸ್ಥಾನಮಾನ, ಹಣಕಾಸು ಸ್ಥಿತಿ ನೋಡಿ ನಾಗರತ್ನಗೆ ಎರಡು ಕೋಟಿ ರೂ ಜೀವನಾಂಶ ನೀಡುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.
ವಿಜಯ್ – ನಾಗರತ್ನ ದಂಪತಿಗೆ ಮೂವರು ಮಕ್ಕಳಿದ್ದಾರೆ, ಮೋನಿಷಾ, ಮೋನಿಕಾ, ಮತ್ತು ಮಗ ಸಾಮ್ರಾಟ್. ವಿಜಯ್ ಮತ್ತು ನಾಗರತ್ನ 2013ರಲ್ಲಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದರು. 2014ರಲ್ಲಿ ಸಂಧಾನ ನಡೆದು ಅರ್ಜಿ ಹಿಂಪಡೆಯಲಾಗಿತ್ತು. ಆದರೆ ವಿಜಯ್ ಅವರು 2018ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳ ವಿಚಾರಣೆಯ ಬಳಿಕ ಜೂನ್ 2024ರಲ್ಲಿ ಬೆಂಗಳೂರಿನ ನ್ಯಾಯಾಲಯವು ದುನಿಯಾ ವಿಜಯ್ ಅವರ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತ್ತು.
