ದುಬೈ : ಕೊರೊನಾ ಹೆಚ್ಚಳ ಪ್ರಕರಣ ; ಒಂದು ತಿಂಗಳು ಅನಾವಶ್ಯಕ ಸರ್ಜರಿ ಹಾಗೂ ರೆಸ್ಟೋರೆಂಟ್ಗಳಲ್ಲಿ ವಿನೋದ ಕಾರ್ಯಕ್ರಮಗಳಿಗೆ ಬ್ರೇಕ್ -Vishwanews24
ದುಬೈ : ಕೊರೊನಾ ಹೆಚ್ಚಳ ಪ್ರಕರಣ ; ಒಂದು ತಿಂಗಳು ಅನಾವಶ್ಯಕ ಸರ್ಜರಿ ಹಾಗೂ ರೆಸ್ಟೋರೆಂಟ್ಗಳಲ್ಲಿ ವಿನೋದ ಕಾರ್ಯಕ್ರಮಗಳಿಗೆ ಬ್ರೇಕ್ -Vishwanews24
ದುಬೈ: ದುಬೈನಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಅನಗತ್ಯ ಸರ್ಜರಿ ಹಾಗೂ ಹೊಟೇಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ವಿನೋದ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದೆ. ಹೊಸ ವರ್ಷಾಚರಣೆಗೆ ವಿಶ್ವದ ವಿವಿಧ ಭಾಗದಗಳಿಂದ ದುಬೈಗೆ ಸಾವಿರಾರು ಮಂದಿ ಬಂದಿದ್ದು, ಇದಾದ ಬಳಿಕ ಅಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಳವಾಗಿದೆ.
ಒಂದು ತಿಂಗಳ ಅವಧಿಗೆ ಅನಗತ್ಯ ಸರ್ಜರಿ ಹಾಗೂ ಮುಂದಿನ ಆದೇಶದ ವರೆಗೆ ಹೊಟೇಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ವಿನೋದ ಕಾರ್ಯಕ್ರಮ ಆಯೋಜಿಸುವುದಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
ಹೊಸ ವರ್ಷ ಆಚರಣೆಗೆ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಿದ್ದ ದುಬೈನಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರ ತೊಡಗಿದ್ದರು. ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಜನ ಸೇರ ತೊಡಗಿದ್ದರು. ಇದರ ಪರಿಣಾಮ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ, ದುಬೈ ಸರ್ಕಾರ ಮತ್ತೆ ನಿರ್ಬಂಧ ಹೇರಿದೆ.
ಉಡುಪಿ: ಕಾರ್ಣಿಕ ಮೆರೆದ ಮೂಡುಸಗ್ರಿ ಸನ್ನಿಧಾನದ ಕೊರಗಜ್ಜ ಮತ್ತು ಕಲ್ಕುಡ ಶಕ್ತಿಗಳು -Vishwanews24
ದುಬೈ ಸಹಿತ ಯುಎಇಯಲ್ಲಿ ಜನವರಿ 12 ರಂದು ಹೊಸದಾಗಿ 3,000 ಕೊರೋನಾ ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಅದು ಏರಿಕೆಯಾಗಿ, ಈಗ ಪ್ರತಿನಿತ್ಯ 3,500ಕ್ಕೂ ಹೆಚ್ಚಿನ ಪ್ರಕರಣ ದಾಖಲಾಗುತ್ತಿದೆ. ಹೀಗಾಗಿ ದುಬೈ ಅನಿವಾರ್ಯವಾಗಿ ಮತ್ತೆ ನಿಯಮಗಳನ್ನು ಬಿಗಿಗೊಳಿಸಿದೆ.
ಮಾಸ್ಕ್ ಧಾರಣೆ ಮತ್ತು ದೈಹಿಕ ಅಂತರ ಬಿಟ್ಟು ಉಳಿದೆಲ್ಲಾ ಕೊರೊನಾ ನಿಯಮಾವಳಿಗಳನ್ನು ಸಡಿಲಗೊಳಿಸಿದ್ದ ದುಬೈ ಈಗ ಬೆಲೆ ತೆತ್ತಿದೆ. ದೈನಂದಿನ ಸೋಂಕು ಹೆಚ್ಚಳವಾಗುತ್ತಿದ್ದಂತೆಯೇ ದುಬೈನಿಂದ ಆಗಮಿಸುವ ಪ್ರಯಾಣಿಕರಿಗೆ ಬ್ರಿಟನ್ ನಿರ್ಬಂಧ ವಿಧಿಸಿದೆ.
ವೀರ ಹನುಮಂತನ ಚಿತ್ರದ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್ ಅಧ್ಯಕ್ಷ -Vishwanews24
