ದೇಶ ವಿಭಜನೆಯ ಮಾತನಾಡಿ ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ : ಸುನೀಲ್‍ಕುಮಾರ್ – vishwanews24

Featured, ರಾಜ್ಯ ನ್ಯೂಸ್

ದೇಶ ವಿಭಜನೆಯ ಮಾತನಾಡಿ ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ : ಸುನೀಲ್‍ಕುಮಾರ್

ಬೆಂಗಳೂರು: ದೇಶ ವಿಭಜನೆ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್ ಅವರಿಗೆ ಬುದ್ಧಿವಾದ ಹೇಳುವ ಕೆಲಸ ಆಗಬೇಕು. ಹೊರತು ಅವರನ್ನು ಸಮರ್ಥಿಸುವುದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿದ್ದರೂ ಅನುದಾನ ಕಡಿಮೆ ಆಗಿದೆ ಎಂದು ದೇಶ ವಿಭಜನೆಯ ಮಾತನಾಡಿದ್ದಾರೆ. ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ. ಸಮರ್ಪಕ ಮಾಹಿತಿ ಇಲ್ಲದೆ, ದಕ್ಷಿಣ ಭಾರತ ವಿಭಜನೆ ಆಗಬೇಕು ಅನ್ನೋ ಕಲ್ಪನೆಯೇ ಸರಿಯಲ್ಲ. ಇವರದು ಹತಾಶೆಯ ಹೇಳಿಕೆ. ಯಾವುದೇ ಕಾರಣಕ್ಕೂ ದೇಶ ವಿಭಜನೆ ಆಗಬಾರದು ಎಂದರಲ್ಲದೆ, ಇವರ ಹೇಳಿಕೆಗೆ ಜನಾಕ್ರೋಶ ಶುರುವಾಗಿದೆ. ಅದನ್ನು ಸಮರ್ಥನೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಉಡುಪಿ : ಆಟೋ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವಲಯ ಸ್ಟಿಕರ್ ಅಳವಡಿಕೆಗೆ ಕಡ್ಡಾಯ – vishwanews24

Leave a Reply