ಮಂಗಳೂರು : ರಾಜ್ಯಾದ್ಯಂತ ಫೆಬ್ರವರಿ 9 ರವರೆಗೆ ಹನುಮಧ್ವಜ ಅಭಿಯಾನ : ಬಜರಂಗದಳ – vishwanews24
ಮಂಗಳೂರು : ರಾಜ್ಯಾದ್ಯಂತ ಫೆಬ್ರವರಿ 9 ರವರೆಗೆ ಹನುಮಧ್ವಜ ಅಭಿಯಾನ : ಬಜರಂಗದಳ
ಮಂಗಳೂರು : ಮಂಡ್ಯ ಜಿಲ್ಲೆ ಕರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆಗೆದುಹಾಕಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರಾಜ್ಯಾದ್ಯಂತ ಫೆಬ್ರವರಿ 9 ರವರೆಗೆ ಹನುಮಧ್ವಜ ಅಭಿಯಾನ ನಡೆಸುತ್ತಿರುವುದಾಗಿ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲ ಹಿಂದೂಗಳ ಮನೆ ಮನೆಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜ ಹಾರಿಸಲಾಗುವುದು. ಕರೆಗೋಡಿನಲ್ಲಿ ಹನುಮಧ್ವಜ ಹಾರಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಇದೇ 9ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಫೆ.10ರಂದು ಎಲ್ಲೆಡೆ ಹನುಮಾನ್ ಚಾಲೀಸಾ ಪಠಣ ನಡೆಸಲಾಗುವುದು ಎಂದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದು, ಹನುಮ ಧ್ವಜ ತೆರವುಗೊಳಿಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಇದನ್ನು ಪ್ರತಿಭಟಿಸಿ ಎಲ್ಲ ಹಿಂದೂಗಳು ತಮ್ಮ ಮನೆಗಳಲ್ಲಿ ಹನುಮ ಧ್ವಜ ಹಾಕಬೇಕು ಎಂದು ಅವರು ಮನವಿ ಮಾಡಿದರು.
ದೇಶ ವಿಭಜನೆಯ ಮಾತನಾಡಿ ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ : ಸುನೀಲ್‍ಕುಮಾರ್ – vishwanews24
ಆಪ್ಘಾನಿಸ್ತಾನ, ಪಾಕಿಸ್ತಾನ ಸೇರಿ ಅಖಂಡ ಭಾರತ ನಿರ್ಮಾಣವಾಗಬೇಕು ಎಂಬುದು ನಮ್ಮ ಬೇಡಿಕೆ. ಪ್ರತಿ ವರ್ಷ ಆಗಸ್ಟ್ 14ರಂದು ನಾವು ಅಖಂಡ ಭಾರತ ಸಂಕಲ್ಪ ದಿನ ಮಾಡುತ್ತೇವೆ. ದೇಶ ವಿಭಜನೆ ಬಗ್ಗೆ ಸಂಸದ ಡಿ.ಕೆ. ಸುರೇಶ್ ಆಡಿರುವ ಮಾತು ಖಂಡನೀಯ. ಕಾಂಗ್ರೆಸ್ಸಿಗರು ದೇಶವನ್ನು ತುಂಡು ಮಾಡಿದ್ದಾರೆ. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ‘ ಎಂದು ಟೀಕಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ಇರುವ ಸ್ಥಳ ವಕ್ಫ್ ಮಂಡಳಿಯ ಆಸ್ತಿ ಅಲ್ಲ ಎಂದು ನ್ಯಾಯಾಲಯದ ತೀರ್ಪು ಬಂದಿದೆ. ಜ್ಞಾನವಾಪಿ, ಮಳಲಿ ಹಿಂದೆ ಮಂದಿರಗಳೇ ಆಗಿದ್ದವು. ಮುಸ್ಲಿಂ ಆಕ್ರಮಣದ ನಂತರ ಅವುಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಲಾಯಿತು. ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ’ ಎಂದು ಸುನೀಲ್ ಕೆ.ಆರ್. ಪ್ರತಿಕ್ರಿಯಿಸಿದರು.
ಉಡುಪಿ : ಆಟೋ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವಲಯ ಸ್ಟಿಕರ್ ಅಳವಡಿಕೆಗೆ ಕಡ್ಡಾಯ – vishwanews24
