ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ನ ಗತವೈಭವ ತರುವುದೊಂದೇ ನನ್ನ ಉದ್ದೇಶ : ನೂತನ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ – vishwanews24
ದ.ಕ. ಜಿಲ್ಲೆಯ 8ಕ್ಕೆ 8 ಕ್ಷೇತ್ರವನ್ನೂ ಗೆಲ್ಲಿಸುವ ಹೊಣೆಗಾರಿಕೆ ನನ್ನದು: ನೂತನ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ
ಮಂಗಳೂರು: ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಕರಾವಳಿ ಜಿಲ್ಲೆ ಸಾಮರಸ್ಯದ ನೆಲೆಯಾಗಿತ್ತು. ಜಾತಿ, ಮತ, ಧರ್ಮಗಳ ಭೇದ ಇಲ್ಲದೇ ಜನ ಒಗ್ಗಟ್ಟಾಗಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಸೋಲಾಗಬಾರದಿತ್ತು. ಇಲ್ಲಿ ವಿರೋಧ ಪಕ್ಷದವರು ಯಾವ ರೀತಿ ಗೆದ್ದುಕೊಂಡು ಬರುತ್ತಿದ್ದಾರೆ ಎನ್ನುವುದನ್ನು ಮತದಾರರು ನೋಡಿದ್ದಾರೆ.ಹಿಂದಿನ ಗತವೈಭವವ ಮತ್ತೆ ಮರುಕಳಿಸಬೇಕು. ಇಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಭಾರೀ ಅಭಿವೃದ್ಧಿ ಆಗಿತ್ತು ಎಂದು ನೂತನ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಕಡೆಯ ಬೂತ್ನವರೆಗೂ ನಾನು ಹೋಗುತ್ತೇನೆ. ಪ್ರತಿಯೊಬ್ಬರನ್ನೂ ಸಂಪರ್ಕಿಸುತ್ತೇನೆ ಎಂದರು.
ಇದನ್ನೂ ಓದಿ:
ಯಶವಂತಪುರ ಮತ್ತು ಮಂಗಳೂರು ವಂದೇ ಭಾರತ್ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24
ಬೇರೆ ಬೇರೆ ಕಾರಣಗಳಿಂದಾಗಿ ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಹುದು. ಎಲ್ಲರನ್ನೂ ಒಟ್ಟು ಸೇರಿಸುವ ಕೆಲಸ ಖಂಡಿತಾ ಮಾಡುತ್ತೇನೆ ಎಂದರು.
ಪಕ್ಷದ ನಾಯಕರು, ಕಾರ್ಯಕರ್ತರನ್ನು ಸೇರಿಸಿ 2028ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8ಕ್ಕೆ 8 ಕ್ಷೇತ್ರವನ್ನೂ ಗೆಲ್ಲಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಮಂಗಳೂರು ನಗರ ಪಾಲಿಕೆಯಲ್ಲೂ ನಾವು ಅಧಿಕಾರ ಪಡೆಯುತ್ತೇವೆ. ಈ ಹಿಂದೆ ನಡೆದ ಚುನಾವಣೆಗಳ ಆತ್ಮಾವಲೋಕನ ಮಾಡುತ್ತೇವೆ. ಸೋಲು ಆಗಿರಬಹುದು. ಪಕ್ಷ ಕಟ್ಟಲು ನಿರಂತರವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಕೇವಲ ಬಿಲ್ಲವರು ಮಾತ್ರವಲ್ಲ, ಸರ್ವ ಸಮುದಾಯದವರ ಒಲವು ಗಳಿಸುತ್ತೇನೆ. ನನ್ನ ಉದ್ದೇಶ ಒಂದೇ..ಈ ಜಿಲ್ಲೆಯಲ್ಲಿ ಕಾಂಗ್ರೆಸ್ನ ಗತವೈಭವ ತರುವುದೊಂದೇ ಉದ್ದೇಶವಾಗಿದೆ. ಪಕ್ಷ ಸಂಘಟನೆಗೆ ನನ್ನ ಪ್ರಾಮುಖ್ಯತೆ ಎಂದರು.
ಇದನ್ನೂ ಓದಿ:
ರಾಜ್ಯದಲ್ಲಿ ತಾಪಮಾನ ಏರಿಕೆ: ಡೆಂಗ್ಯೂ, ಹೀಟ್ಸ್ಟ್ರೋಕ್ ಭೀತಿಗೆ ಆರೋಗ್ಯ ಇಲಾಖೆ ಅಲರ್ಟ್ – vishwanews24
