ಯಶವಂತಪುರ ಮತ್ತು ಮಂಗಳೂರು ವಂದೇ ಭಾರತ್‌ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

Featured, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ವಂದೇ ಭಾರತ್‌ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿ.. ನಿಗದಿತ ಸಮಯಕ್ಕೂ ಮುಂಚಿತ ತಲುಪಿದ ರೈಲು

ಮಂಗಳೂರು / ಪುತ್ತೂರು: ಯಶವಂತಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ಸೆ. 5ರಂದು ನಡೆದ ಮೊದಲ ಪ್ರಾಯೋಗಿಕ ಸಂಚಾರದಲ್ಲಿ ತಾಂತ್ರಿಕ ದೋಷ ಕಂಡುಬಂದು ರೈಲು ಸುಮಾರು ಎರಡು ತಾಸು ವಿಳಂಬವಾಗಿ ಮಂಗಳೂರು ತಲುಪಿತ್ತು. ಹೀಗಾಗಿ, ಈ ಬಾರಿ ನೈಋತ್ಯ ರೈಲ್ವೆಯು ಪ್ರಾಯೋಗಿಕ ಸಂಚಾರವನ್ನು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ಗಷ್ಟೇ ಮಿತಿಗೊಳಿಸಿತ್ತು.

ಯಶವಂತಪುರದಿಂದ ಬೆಳಗ್ಗೆ 6.50ಕ್ಕೆ ಹೊರಟ ರೈಲು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಹಾಗೂ ಕಬಕ ಪುತ್ತೂರು ಮಾರ್ಗವಾಗಿ ಅಪರಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕಿತ್ತು. ಆದರೆ, ನಿಗದಿತ ಸಮಯಕ್ಕಿಂತ 55 ನಿಮಿಷ ಮುಂಚಿತವಾಗಿ ರೈಲು ಅಪರಾಹ್ನ 1.55ಕ್ಕೆ ಮಂಗಳೂರು ಜಂಕ್ಷನ್ ತಲುಪಿದೆ.

ಮುಲ್ಕಿ : ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ: ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳ ಬಂಧನ – vishwanews24

ಪುತ್ತೂರು ನಿಲ್ದಾಣದಲ್ಲಿ ಸ್ವಾಗತಕ್ಕೆ ಸೇರಿದ್ದ ಜನ
ವಂದೇ ಭಾರತ್ ರೈಲಿಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎನ್ನುವ ಹಕ್ಕೊತ್ತಾಯ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಪ್ರಾಯೋಗಿಕ ಸಂಚಾರದ ಸಂದರ್ಭ ಪುತ್ತೂರಿನಲ್ಲಿ ನಿಲುಗಡೆ ನೀಡಲಾಗುತ್ತದೆ ಎಂಬ ಮಾಹಿತಿ ಹರಿದಾಡಿತ್ತು. ಬೆಂಗಳೂರಿನಿಂದ ಆಗಮಿಸುವ ಸಂದರ್ಭ ಪುತ್ತೂರು ನಿಲ್ದಾಣದಲ್ಲಿ ಬಳಿ ನಿಧಾನವಾಗಿ ಸಂಚರಿಸಿ ಬಳಿಕ ಮತ್ತೆ ಬೆಂಗಳೂರಿಗೆ ತೆರಳುವ ಸಂದರ್ಭ ನಿಲ್ಲಿಸದೆ ನೇರವಾಗಿ ಸಾಗಿದೆ ಎನ್ನಲಾಗಿದೆ.

ಪುತ್ತೂರು ನಿಲ್ದಾಣದಲ್ಲಿ 2 ನಿಮಿಷಗಳ ಕಾಲ ನಿಲುಗಡೆ ನೀಡಲಾಗುತ್ತದೆ ಎಂಬ ಮಾಹಿತಿ ಹರಡಿದ್ದ ಹಿನ್ನೆಲೆಯಲ್ಲಿ ಒಂದಷ್ಟು ಮುಖಂಡರು, ಬಳಕೆದಾರರು, ಹೋರಾಟಗಾರರು ಸೇರಿದ್ದರು. ಆದರೆ ಬುಧವಾರ ಅಪರಾಹ್ನ ನಿಗದಿತ ಸಮಯಕ್ಕಿಂತ ಸುಮಾರು ಅರ್ಧ ಗಂಟೆ (1.12ಕ್ಕೆ) ಮುಂಚೆಯೇ ರೈಲು ಪುತ್ತೂರು ನಿಲ್ದಾಣದ ಮೂಲಕ ಸಾಗಿದೆ. ಮಂಗಳೂರಿಗೆ ತೆರಳಿ ಮರಳಿ ಮತ್ತೆ 3.15ರ ಸಮಯದಲ್ಲಿ ಪುತ್ತೂರು ನಿಲ್ದಾಣದ ಮೂಲಕ ಸಾಗಿದೆ.

ಉಡುಪಿ: ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಬಳಸಿ ನ್ಯಾಯಾಲಯಕ್ಕೆ ವಂಚಿಸಲು ಯತ್ನ: ಇಬ್ಬರ ಬಂಧನ – vishwanews24

Leave a Reply