ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳಿ, ಇಲ್ಲದಿದ್ದರೆ ಬದಲಾವಣೆ ಆಗುತ್ತೆ: ಸಂಸತ್ ಅಧಿವೇಶನಕ್ಕೆ ಗೈರಾಗಿರುವ ಸಂಸದರಿಗೆ ಮೋದಿ ಎಚ್ಚರಿಕೆ – VIshwanews24
ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳಿ, ಇಲ್ಲದಿದ್ದರೆ ಬದಲಾವಣೆ ಆಗುತ್ತೆ: ಸಂಸತ್ ಅಧಿವೇಶನಕ್ಕೆ ಗೈರಾಗಿರುವ ಸಂಸದರಿಗೆ ಮೋದಿ ಎಚ್ಚರಿಕೆ – VIshwanews24
ನವದೆಹಲಿ: ಪಾರ್ಲಿಮೆಂಟ್ನ ಚಳಿಗಾಲದ ಅಧಿವೇಶನದಲ್ಲಿ ಸಂಸದರ ಹಾಜರಾತಿ ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಅಧಿವೇಶನಕ್ಕೆ ಹಾಜರಾಗಲು ಎಲ್ಲಾ ಸಂಸದರು ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ನೀವೇ ಬದಲಾಗಿ, ಇಲ್ಲವೇ ಬದಲಾವಣೆಗೆ ಸಿದ್ಧರಾಗಿ ಎಂದು ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.
ನವದೆಹಲಿಯ ಡಾ.ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಮೋದಿ, ಅಧಿವೇಶನಕ್ಕೆ ಹಾಜರಾಗದ ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನೀವು ನಿಮ್ಮನ್ನು ಬದಲಿಸಿಕೊಳ್ಳಿ, ಬದಲಾಯಿಸಿಕೊಳ್ಳದಿದ್ದರೆ ಸರಿಯಾದ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ” ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.
“ದಯವಿಟ್ಟು ಸಂಸತ್ತು ಹಾಗೂ ಸಭೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳಿ. ಈ ಬಗ್ಗೆ ನಿರಂತರವಾಗಿ ಒತ್ತಡ ಹೇರುವುದು ಹಾಗೂ ನಿಮ್ಮನ್ನು ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಒಳ್ಳೆಯದಲ್ಲ. ನೀವು ನಿಮ್ಮನ್ನು ಬದಲಾಯಿಸಿಕೊಳ್ಳದಿದ್ದರೆ ಸರಿಯಾದ ಸಮಯದಲ್ಲಿ ಬದಲಾವಣೆಗಳಾಗುತ್ತವೆ” ಎಂದು ಪ್ರಧಾನಿ ಹೇಳಿದರು.
ಈ ಅಧಿವೇಶನಕ್ಕಾಗಿ 12 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಮೇಲೆ ಸರಕಾರವು ವಿಪಕ್ಷಗಳಿಂದ ಆಕ್ರೋಶವನ್ನು ಎದುರಿಸುತ್ತಿದೆ.
ಪುತ್ತೂರು : ಕರಾವಳಿ ಬಿಜೆಪಿಯ ಭೀಷ್ಮ ಉರಿಮಜಲು ರಾಮ ಭಟ್ ಪಂಚಭೂತಗಳಲ್ಲಿ ಲೀನ – Vishwanews24
