ಪುತ್ತೂರು : ಹಿಂದೂ ಯುವತಿ ಜೊತೆ ಇದ್ದ ಮುಸ್ಲಿಂ ಯುವಕನಿಗೆ ತಂಡದಿಂದ ಹಲ್ಲೆ… Vishwanews24

Featured, ದಕ್ಷಿಣ ಕನ್ನಡ

ಪುತ್ತೂರು : ಹಿಂದೂ ಯುವತಿ ಜೊತೆ ಜೊತೆ ಇದ್ದ ಮುಸ್ಲಿಂ ಯುವಕನಿಗೆ ತಂಡದಿಂದ ಹಲ್ಲೆ…

ಪುತ್ತೂರು  : ಸಹಪಾಠಿ ಯುವತಿ ಜೊತೆ ಜ್ಯೂಸ್ ಕುಡಿಯುತ್ತಿದ್ದ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಹಲ್ಲೆಗೊಳಗಾದ ವಿಧ್ಯಾರ್ಥಿಯನ್ನು ಮಹಮ್ಮದ್ ಫಾರಿಶ್(18) ಎಂದು ಗುರುತಿಸಲಾಗಿದೆ. ಈತ ತನ್ನ ಸಹಪಾಠಿ ವಿದ್ಯಾರ್ಥಿನಿಯ ಜೊತೆಗೆ ಬಸ್ಸು ನಿಲ್ದಾಣದ ಬಳಿಯಲ್ಲಿ ಜ್ಯೂಸ್ ಕುಡಿಯತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭ ಸುಮಾರು 15 ಮಂದಿಯ ತಂಡ ಅಲ್ಲಿಗೆ ಆಗಮಿಸಿ ಆತನ ಹೆಸರು ಕೇಳಿ ಬಳಿಕ ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಗೊಳಗಾಗಿರುವ ಮಹಮ್ಮದ್ ಫಾರಿಸ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಪು: ಕೋವಿಡ್ ಸಮಯ ಜಾತಿ ಧರ್ಮ ನೋಡದೆ ಉಪಕಾರ ಮಾಡಿದ್ದ ಗುರ್ಮೆ ಸುರೇಶ್ ಶೆಟ್ಟಿ :  ಅನಿಲ್ ಮಾಬೆಲ್ – Vishwanews24

ಇನ್ನು ಸುಮಾರು 30 ರಿಂದ 50 ಯುವಕರ ತಂಡ ಈತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಘಟನೆಯನ್ನ ಎಸ್ಡಿಪಿಐ ಹಾಗೂ ಮುಸ್ಲಿಂ ಯುವಜನ ಪರಿಷತ್ ಖಂಡಿಸಿದೆ. ಹಾಗೆಯೇ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹಾಗೂ ಉಪನಿರೀಕ್ಷಕ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ

Leave a Reply