ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಗೆದ್ದರೆ ಕಾರ್ಯಕರ್ತರು ಗೆದ್ದಂತೆ : ಸತ್ಯೇಂದ್ರ ಪೈ ಬೆಂಗಳೂರು – Vishwanews24

Featured, ಉಡುಪಿ, ರಾಜ್ಯ ನ್ಯೂಸ್

ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಗೆದ್ದರೆ ಕಾರ್ಯಕರ್ತರು ಗೆದ್ದಂತೆ..

 ಕಾಪುವಿನ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಶಾಸಕನಂತೆ : ಸತ್ಯೇಂದ್ರ ಪೈ ಬೆಂಗಳೂರು

ಬೆಂಗಳೂರು: ಕಾಪುವಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾನ್ಯ ಕಾರ್ಯಕರ್ತನಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು ಅವರನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಮಾತ್ರವಲ್ಲದೆ ಗುರ್ಮೆ ಸುರೇಶ್ ಶೆಟ್ಟಿ ಅಂತಹ ಸಜ್ಜನ ವ್ಯಕ್ತಿಯನ್ನು ಆರಿಸಿ ಕಳಿಸುವುದರಿಂದ ವಿಧಾನಸಭೆಯ ಒಳಗೂ ಬಡವರ ಪರವಾಗಿ ಗಟ್ಟಿ ಧ್ವನಿಯಾಗುವುದರಲ್ಲಿ ಅನುಮಾನವಿಲ್ಲ .

ಜಾತಿ ಧರ್ಮ ಭೇದವಿಲ್ಲದೆ ಸಕ್ರಿಯವಾಗಿ ಸಮಾಜ ಸೇವೆಯನ್ನೇ ಉಸಿರಾಗಿಸಿರುವ ಗುರ್ಮೆ ಸುರೇಶ್ ಶೆಟ್ಟಿ ಅವರು ಗೆದ್ದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಗೆದ್ದಂತೆ ಕಾಪುವಿನ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಶಾಸಕನಂತೆ ಇರಬಹುದು.

ನ್ಯಾಯ-ನೀತಿ-ಧರ್ಮ-ಸತ್ಯ ರಾಜಕಾರಣ ಮಾಡಿದವರು ಸೊರಕೆ : ಅನಿವಾಸಿ ಭಾರತೀಯ ಸುಂದರಾಮ್ ಶೆಟ್ಟಿ – Vishwanews24

ತುಳುನಾಡಿನ ದೈವ ದೇವರು ದೇವಸ್ಥಾನ ಮಠ ಮಂದಿರಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿರುವಂತಹ ಶೆಟ್ಟಿಯವರು ಕಾಪುವಿನಲ್ಲಿ ಗೆಲ್ಲಬೇಕು ಆ ಮುಖಾಂತರವಾಗಿ ಇಡೀ ರಾಜ್ಯದಲ್ಲಿ ಕಾಪು ಒಂದು ಇತಿಹಾಸ ನಿರ್ಮಾಣ ಮಾಡಬೇಕು ಎಂದು ಬೆಂಗಳೂರು ಉದ್ಯಮಿ ಸತ್ಯೇಂದ್ರ ಪೈ ಅವರು ಅವರು ತಿಳಿಸಿದ್ದಾರೆ.

Leave a Reply