Featured

ಪ್ರಾಮಾಣಿಕ ,ಸ್ವಚ್ಚ, ದಕ್ಷ , ಪಾರದರ್ಶಕ ಪುರಸಭಾ ಸದಸ್ಯರಿಂದ – ಪುರಸಭೆಯ ಅಭಿವ್ರಧ್ದಿಯೇ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಗುರಿ:press release

ಪ್ರಾಮಾಣಿಕ ,ಸ್ವಚ್ಚ, ದಕ್ಷ , ಪಾರದರ್ಶಕ ಪುರಸಭಾ ಸದಸ್ಯರಿಂದ – ಪುರಸಭೆಯ ಅಭಿವ್ರಧ್ದಿಯೇ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಗುರಿ:press release

 

ಸೋಮವಾರ 27/12/2021 ರಂದು ಪುರಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ ಅಧಿಕಾರದಲ್ಲಿದ್ದ ಮತ್ತು ಚುನಾವಣೆಯಲ್ಲಿರುವ ರಾಜಕೀಯ ಪಕ್ಷ ಮತ್ತು ಪುರಸಭಾ ಸದಸ್ಯರಿಂದ ಕಾಪುವಿನ ಜನತೆಗೆ ಮೂಲಭೂತ ಸೌಲಭ್ಯ , ಭ್ರಷ್ಟಚಾರ ರಹಿತ ಆಡಳಿತ ,ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಜನತೆಗೆ ತಲುಪಿಸುವಲ್ಲಿ ಮತ್ತು ಬಳಸುವಲ್ಲಿ ವಿಫುಲವಾಗಿದೆ .ಈ ಮೊದಲು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತದಾರರ ಧ್ವನಿಯಾಗದೆ ಪಕ್ಷದ ನಾಯಕರ ದ್ವನಿಯಾಗಿದ್ದು ಮತದಾರರಿಗೆ ನೀಡಿದ ಆಶ್ವಾಸನೆ ಈಡೇರಿಸಲಾಗಲಿಲ್ಲ. .ಈ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತನ್ನ ಎರಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರನ್ನು ಎರಡೂ ವಾರ್ಡಿನ ಮತದಾರರು ಗೆಲ್ಲಿಸಿದಲ್ಲಿ ಅಭ್ಯರ್ಥಿಗಳು ತಮ್ಮ ಮತದಾರರ ಧ್ವನಿಯಾಗಲಿದ್ದು, ಸರಕಾರದ ವತಿಯಿಂದ ಬರುವ ಅನುದಾನವನ್ನು ಸಮಗ್ರವಾಗಿ ಆಯಾ ವಾರ್ಡಿನ ಅಭಿವೃದ್ಧಿಗಾಗಿ ವಿನಿಯೋಗಿಸಲಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಕಾಪುವಿನ ಪರಿಸರದಲ್ಲಿ ಜನಮನ್ನಣೆ ಪಡೆದ, ಸ್ವಚ್ಛ ಹಸ್ತದ, ಎಲ್ಲ ವರ್ಗಗದವರನ್ನು ಸರಿದೂಗಿಸಿ ಕೊಂಡೊಯ್ಯುವ ,ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಮೌಲ್ಯಕ್ಜೆ ಭದ್ದರಾಗಿದ್ದು ಪುರಸಭೆಯ ಚಟುವಟಿಕೆಗಳ ಕುರಿತು ಅಪಾರ ಅನುಭವವಿರುವ ಮತ್ತು ಅನುದಾನಗಳನ್ನು ಬಗ್ಗೆ ತಿಳುವಳಿಕೆಯುಳ್ಳ ,ಗ್ರಾಮಸ್ಧರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯ ನೀಡಬಲ್ಲ ಇಬ್ಬರು ಪ್ರಾಮಾಣಿಕ ಅಭ್ಯರ್ಥಿಗಳನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಿಲ್ಲಿಸಿದೆ ಈ ಇಬ್ಬರು ಅಭ್ಯರ್ಥಿಗಳು ಅನ್ವರ್ ಅಲಿಕ ಕಾಪು ಮತ್ತು ಗುಲ್ಶನ್ ಮೊಹಮ್ಮದ್ ವಾರ್ಡಿನ ಜನಮನ್ನಣೆ ಪಡೆದವರಾಗಿದ್ದು,ವಾರ್ಡಿನ ಪರಿಸರದವರಾಗಿದ್ದು ಇವರನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕೆಂದು ಕಾಪುವಿನ 17ನೇ ವಾರ್ಡ್ ಬಡಗರುಗುತ್ತು ಮತ್ತು 18 ನೇ ವಾರ್ಡ್ ಕೊಂಬಗುಡ್ಡೆಯ ಮತದಾರ ಬಂಧುಗಳಾದ ತಮ್ಮಲ್ಲಿ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.

ಅಬ್ದುಲ್ ಅಝೀಝ್ ಉದ್ಯಾವರ,
ಜಿಲ್ಲಾಧ್ಯಕ್ಷರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ.

Vishwa News 24

Recent Posts

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

13 hours ago

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ  ಸಂಭ್ರಮದ ನಡುವೆಯೇ…

13 hours ago

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ  – vishwanews24

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ   ಮಂಗಳೂರು:…

13 hours ago

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ – vishwanews24

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…

13 hours ago

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

2 days ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

2 days ago