ಬಂಟ್ವಾಳ: ಹೃದಯಾಘಾತ – ಮಲಗಿದ್ದಲ್ಲಿಯೇ ಯುವಕ ಮೃತ್ಯು – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ಹೃದಯಾಘಾತದಿಂದ ಯುವಕ ಮೃತ್ಯು

ಬಂಟ್ವಾಳ: ಲೊರೆಟ್ಟೊ ಸಮೀಪದ ಬಾರೆಕ್ಕಾಡಿನಲ್ಲಿ ಎ. 13ರ ರಾತ್ರಿ ಊಟ ಮಾಡಿ ಮಲಗಿದ್ದ ಯುವಕನೋರ್ವ ಮಲಗಿದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಬಾರೆಕ್ಕಾಡು ನಿವಾಸಿ ಧೀರಜ್‌(29) ಮೃತರು. ರಾತ್ರಿ ಊಟ ಮಾಡಿ ಮಲಗಿದ್ದ ಯುವಕ ಬೆಳಗ್ಗೆ ಏಳದೇ ಇದ್ದು, ಗಾಬರಿಗೊಂಡ ಮನೆ ಯವರು ಆಸ್ಪತ್ರೆಗೆ ಕರೆ ತಂದಾಗ ಪರೀಕ್ಷಿಸಿದ ವೈದ್ಯರು ಆತ ಹೃದಯಾಘಾತದಿಂದ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಗೂಡ್ಸ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾರಿಕ್ಕಾಡಿನ ನಾರಾಯಣ ಅವರ ಪುತ್ರನಾಗಿರುವ ಧೀರಜ್‌ ಗೂಡ್ಸ್‌ ಆಟೋ ಚಾಲಕನಾಗಿದ್ದು, ಅವಿವಾಹಿತನಾಗಿದ್ದರು ಎನ್ನಲಾಗಿದೆ. .

Leave a Reply