ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಪಿ ನಡ್ಡಾ – Vishwanews24
ರಾಜ್ಯದ ಜನತೆಯಿಂದಲೇ, ಜನತೆಗಾಗಿ, ಜನತೆಗೋಸ್ಕರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಪಿ ನಡ್ಡಾ
BPL ಕುಟುಂಬದವರಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, 5ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣಾ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಡಿ.ವಿ ಸದಾನಂದಗೌಡ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಉಪಸ್ಥಿತರಿದ್ದರು.
ಜನರ ಹಿತದೃಷ್ಟಿಯಿಂದ ಪ್ರಣಾಳಿಕೆ ತಯಾರಿಸಿದ್ದೇವೆ
ಜನರ ಹಿತದೃಷ್ಟಿಯನ್ನಿಕೊಟ್ಟುಕೊಂಡು ಪ್ರಣಾಳಿಕೆ ತಯಾರಿಸಿದ್ದೇವೆ. ಪ್ರಣಾಳಿಕೆ ರಾಜ್ಯ ಸರ್ಕಾರ ನಡೆಯುವ ದಿಕ್ಕನ್ನು ತೋರಿಸುತ್ತದೆ. ಸುಮಾರು 2 ವರ್ಷ ಕೊರೊನಾದಿಂದ ಆರ್ಥಿಕ ಕುಸಿತ ಆಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು
ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು ನೀಡುತ್ತೇವೆ. 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಸಿರಿಧಾನ್ಯ ನೀಡುತ್ತೇವೆ ಎಂದು ಹೇಳಿದರು.
ಕಾರ್ಕಳ: ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಬಿರುಸಿನ ಮತ ಪ್ರಚಾರ – Vishwanews24
ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ಏನಿದೆ
1. ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ 3 ಗ್ಯಾಸ್ ಸಿಲಿಂಡರ್
2. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್ ವಿತರಣೆ
3. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ
4. ಕಡಿಮೆ ಬೆಲೆಯಲ್ಲಿ ಗುಣಮಟ್ಟಣದ ಆಹಾರ ವಸ್ತುಗಳ ಮಾರಾಟ
5. ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು ವಿತರಣೆ
6. ಪ್ರತಿ ತಿಂಗಳು 5 ಕೆಜಿ ಅಕ್ಕಿ, ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್
7. ‘ಪೋಷಣೆ ಯೋಜನೆ’ಯಡಿ ಹಾಲು, ಪಡಿತರ ಕಿಟ್ ವಿತರಣೆ
8. ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆ
9. ‘ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ನಿವೇಶನ ಹಂಚಿಕೆ
10. ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಸ್ಥಾಪನೆಯ ಭರವಸೆ
11. ಎಸ್ಸಿ, ಎಸ್ಟಿ ಮಹಿಳೆಯರಿಗಾಗಿ ಈ ಯೋಜನೆ ಜಾರಿಗೆ ನಿರ್ಧಾರ
12. ವಿಶ್ವೇಶ್ವರಯ್ಯ ವಿದ್ಯಯೋಜನೆಯಡಿ ಸರ್ಕಾರಿ ಶಾಲೆ ಮೇಲ್ದರ್ಜೆಗೆ
