ಭಾರೀ ಗಾಳಿ ಮಳೆಗೆ ಕೆಳಗೆ ಬಿದ್ದ ಬೃಹತ್ ಗಾತ್ರದ ಹೋರ್ಡಿಂಗ್ : ಹಲವಾರು ವಾಹನಗಳಿಗೆ ಹಾನಿ – Vishwanews24

Featured, ದಕ್ಷಿಣ ಕನ್ನಡ

ಭಾರೀ ಗಾಳಿ ಮಳೆಗೆ ಕೆಳಗೆ ಬಿದ್ದ ಬೃಹತ್ ಗಾತ್ರದ ಹೋರ್ಡಿಂಗ್ : ಹಲವಾರು ವಾಹನಗಳಿಗೆ ಹಾನಿ

ಮಂಗಳೂರು : ಭಾರೀ ಗಾಳಿ ಮಳೆಗೆ ಕಟ್ಟಡದ ಮೇಲೆ ಹಾಕಲಾಗಿದ್ದ ಬೃಹತ್ ಹೋರ್ಡಿಂಗ್ ಕೆಳಗೆ ಬಿದ್ದು, ಕಟ್ಟಡದ ಬಳಿ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿಯಾದ ಘಟನೆ ಜು.೫ ರ ಬುಧವಾರ ಬಿಕರ್ನಕಟ್ಟೆಯಲ್ಲಿ ಘಟನೆ ನಡೆದಿದೆ.

ಘಟನೆಯಲ್ಲಿ ಕೆಲವು ಅಂಗಡಿಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹೋರ್ಡಿಂಗ್ ತೆರವುಗೊಳಿಸಿದರು. ಘಟನೆಯಿಂದ ನಂತೂರು-ಪಡೀಲ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅದೃಷ್ಟವಶಾತ್, ಹೋರ್ಡಿಂಗ್ ಮುರಿದು ಬಿದ್ದಾಗ ಕೆಳಗೆ ಯಾರೂ ಇಲ್ಲದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆ – Vishwanews24

Leave a Reply