ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆ – Vishwanews24

Featured, ರಾಷ್ಟ್ರ ನ್ಯೂಸ್

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆ

ನವದೆಹಲಿ: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಮಂಗಳವಾರ ಏಳು ರೂ.ಗಳಷ್ಟು ಹೆಚ್ಚಿಸಿವೆ.

ಇದರಿಂದಾಗಿ ದಿಲ್ಲಿಯಲ್ಲಿ 19 ಕೆ.ಜಿ.ಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ನ ಬೆಲೆ 1,773 ರೂ.ಗಳಿಂದ 1,780 ರೂ.ಗಳಿಗೆ ಏರಿಕೆಯಾಗಿದೆ. ಆದರೆ ಗೃಹಬಳಕೆ LPG ಸಿಲಿಂಡರ್‌ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಈ ಹೆಚ್ಚಳದ ಬಳಿಕ ವಾಣಿಜ್ಯ LPG ಸಿಲಿಂಡರ್ ನ ಬೆಲೆ ಮುಂಬೈನಲ್ಲಿ 1773.50 ರೂ.ಗಳಿಂದ 1780.50 ರೂ.ಗಳಿಗೆ, ಚೆನ್ನೈನಲ್ಲಿ 1,945 ರೂ.ಗಳಿಂದ 1,952 ರೂ.ಗಳಿಗೆ ಮತ್ತು ಕೋಲ್ಕತಾದಲ್ಲಿ 1,895 ರೂ.ಗಳಿಂದ 1902 ರೂ.ಗಳಿಗೆ ಏರಿಕೆಯಾಗಿದೆ.

ವಾಣಿಜ್ಯ LPG ಸಿಲಿಂಡರ್ ಗಳ ಬೆಲೆಯನ್ನು ಈ ವರ್ಷದ ಎಪ್ರಿಲ್ ನಲ್ಲಿ 91.50 ರೂ.,ಮೇ ತಿಂಗಳಿನಲ್ಲಿ 172 ರೂ. ಮತ್ತು ಜೂನ್ ನಲ್ಲಿ 83 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು.

ಕಟಪಾಡಿ : ಕೃತಕ ನೆರೆ – ಮನೆಯೊಳಕ್ಕೆ ನುಗ್ಗಿದ ನೀರು – Vishwanews24

 

Leave a Reply