ಮಂಗಳೂರು :ಅಗ್ನಿಪಥ್ ಮೂಲಕ ಅರ್ಜಿ ಹಾಕಿದವರು ನಿರುದ್ಯೋಗಿಗಳು, ಸೇನಾ ಅಕಾಂಕ್ಷಿಗಳಲ್ಲ : ರಮಾನಾಥ್ ರೈ – Vishwanews24

Featured, ದಕ್ಷಿಣ ಕನ್ನಡ

ಅಗ್ನಿಪಥ್ ಮೂಲಕ ಅರ್ಜಿ ಹಾಕಿದವರು ನಿರುದ್ಯೋಗಿಗಳು, ಸೇನಾ ಅಕಾಂಕ್ಷಿಗಳಲ್ಲ ..

ಜನರಿಗೆ ಉದ್ಯೋಗ ಇಲ್ಲ. ಹಾಗಾಗಿ ಅರ್ಜಿ ಸಲ್ಲಿದ್ದಾರೆ..

ನಾವು ದೇಶದ ಮಕ್ಕಳು, ನಮ್ಮ ಕುಟುಂಬವದರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದಾರೆ..

ಮಂಗಳೂರು: ಅಗ್ನಿಪಥ್ ಮೂಲಕ ಅರ್ಜಿ ಹಾಕಿದವರು ನಿರುದ್ಯೋಗಿಗಳು, ಸೇನಾ ಅಕಾಂಕ್ಷಿಗಳಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಹೇಳಿಕೆ ನೀಡಿದ್ದಾರೆ.

ವಾಯುಸೇನೆಗೆ ನಿರೀಕ್ಷೆಗೆ ಮೀರಿ ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಭಂದಿಸಿದಂತೆ ಅರ್ಜಿ ಹಾಕಿದವರು ಯಾರೂ ಸೇನಾ ಅಕಾಂಕ್ಷಿಗಳಲ್ಲ. ಅವರೆಲ್ಲಾ ನಿರುದ್ಯೋಗಿಳು, ಗುಮಾಸ್ತ ಹುದ್ದೆಗೂ ಇದಕ್ಕಿಂತ ಹೆಚ್ಚು ಅರ್ಜಿ ಹೋಗುತ್ತದೆ. ಜನರಿಗೆ ಉದ್ಯೋಗ ಇಲ್ಲ. ಹಾಗಾಗಿ ಅರ್ಜಿ ಸಲ್ಲಿದ್ದಾರೆ. ಹೊರ ಗುತ್ತಿಗೆ ಆಧಾರದಲ್ಲೆ ಸೇನೆಗೆ ಆಯ್ಕೆ ಮಾಡೋದು ಅಂದರೆ ಏನು ಅರ್ಥ? ಇದನ್ನು ದೇಶಪ್ರೇಮಿಗಳು ಒಪ್ಪಲು ಸಾಧ್ಯವಿಲ್ಲ. ಯುವ ಶಕ್ತಿ ಬೇಕು ಅಂತಾ ಎರಡು ವರ್ಷ ನೇಮಕಾತಿ ಮಾಡದೇ ಇರುವಾಗ ಅವರಿಗೆ ಗೊತ್ತಾಗಿಲ್ವಾ? ಎಂದು ಪ್ರಶ್ನಿಸಿದರು.

ನಳಿನ್ ಕುಮಾರ್ ಕಟೀಲ್ ಒಬ್ಬ ಹಾಸ್ಯಗಾರ. ಆ ಹಾಸ್ಯಗಾರನ ಮಾತಿಗೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ. ಅದಕ್ಕೆ ನಾನು ತಲೆಕಡೆಸಿಕೊಳ್ಳೋದಿಲ್ಲ. ನಾವು ದೇಶದ ಮಕ್ಕಳು, ನಮ್ಮ ಕುಟುಂಬವದರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದಾರೆ ಎಂದರು.

ಮುಂಬೈ : ನಾಲ್ಕು ಅಂತಸ್ತಿನ ಕಟ್ಟಡ ಕುಸಿತ – ಓರ್ವ ಮೃತ್ಯು. ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ – Vishwanews24

Leave a Reply