ಮಂಗಳೂರು : ಎಲ್ಲಾ ಏಜೆನ್ಸಿಗಳು MEA ಅಡಿ ನೋಂದಾವಣೆ ಕಡ್ಡಾಯ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ – vishwanews24
ಮಂಗಳೂರು : ಎಲ್ಲಾ ಏಜೆನ್ಸಿಗಳು MEA ಅಡಿ ನೋಂದಾವಣೆ ಕಡ್ಡಾಯ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು : ನಗರದ ಹೆಚ್ಚಿನ ಮಂದಿ ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಆದರೆ ವಿದೇಶದಲ್ಲಿ ಕೆಲಸ ಕೊಡಿಸುವಾಗಿ ನಂಬಿಸಿ, ನಕಲಿ ಏಜೆಂಟ್ ಗಳಿಂದ ಮೋಸ ಹೋಗುತ್ತಿದ್ದಾರೆ. ಹಾಗಾಗಿ ಇಂಥ ಏಜೆನ್ಸಿಗಳ ಬಗ್ಗೆ ಜನರು ಜಾಗೃತಿಯಿಂದ ಇರಬೇಕು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ವಿದೇಶದಲ್ಲಿ ಕೊಡಿಸುವ ಎಲ್ಲಾ ಏಜೆನ್ಸಿಗಳು ಕಾನೂನು ಬದ್ದವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಮಂಗಳೂರಿನಲ್ಲಿ 25 ರಿಂದ 30 ಏಜೆನ್ಸಿಗಳು ಈ ರೀತಿ ನೋಂದಾಯಿಸಿಕೊಂಡವರಿದ್ದಾರೆ.
ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು – vishwanews24
ಈ ನೋಂದಾಯಿಸಿಕೊಂಡ ಏಜೆನ್ಸಿಗಳನ್ನು ಬಿಟ್ಟು ನಕಲಿ ಏಜೆಂಟ್ ಗಳ ಬಳಿ ಹೋಗಿ ಹಣ ಕೊಟ್ಟು ಮೋಸ ಹೋದವರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದರೂ ಹಣ ವಾಪಸ್ ರಿಕವರಿ ಮಾಡುವುದು ಕೊಂಚ ಕಷ್ಟವಾಗುತ್ತಿದೆ. ಹಾಗಾಗಿ ಎಲ್ಲರೂ ಕೂಡ ಜಾಗೃತರಾಗಿ, MEA ಅಡಿ ದಾಖಲಾತಿ ಮಾಡಿಕೊಂಡ ಏಜೆನ್ಸಿಗಳಿಂದ ಮಾತ್ರ ಹೋಗಬೇಕು ಎಂದು ಅವರು ತಿಳಿಸಿದರು.
