ಮಂಗಳೂರು: ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ : ತಲಪಾಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ಪುನರಾರಂಭ -Vishwanews24
ಮಂಗಳೂರು: ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ :ತಲಪಾಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ಪುನರಾರಂಭ -Vishwanews24
ಮಂಗಳೂರು, : ಕೇರಳದಿಂದ ಬರುವ ಪ್ರಯಾಣಿಕರನ್ನು ತಪಾಸಣೆ ಮಾಡಲು ಫೆ.22ರ ಸೋಮವಾರದಿಂದ ತಲಪಾಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ಅನ್ನು ಪುನರಾರಂಭಿಸಲಾಗಿದೆ.
ತಹಶೀಲ್ದಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಪೊಲೀಸರು ಕೇರಳದಿಂದ ಬರುವವರ ವಿಚಾರಣೆ ನಡೆಸುತ್ತಿದ್ದಾರೆ.
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 200 ಅಂಕ ಕುಸಿತ -Vishwanews24
“ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದ.ಕ ಜಿಲ್ಲಾಡಳಿತ ಫೆ.21ರಂದು ಗಡಿಗಳನ್ನು ಬಂದ್ ಮಾಡಿದೆ. ಮಂಗಳೂರು ಸಂಪರ್ಕಿಸುವ ತಲಪಾಡಿ, ಸಾರಡ್ಕ, ಸುಳ್ಯದ ಜಾಲ್ಸೂರು, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇಣಾಲ ಗಡಿಗಳಲ್ಲಿ ಮಾತ್ರ ದ.ಕ. ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಇತರ ಗಡಿಗಳ ಮೂಲಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ” ಎಂದು ಜಿಲ್ಲಾಡಳಿತ ಹೇಳಿದೆ.
“ಪ್ರಯಾಣಕ್ಕೆ ಅವಕಾಶ ನೀಡಿರುವ ಐದು ಗಡಿಗಳಲ್ಲಿ ದ.ಕ ಜಿಲ್ಲೆಗೆ ಆಗಮಿಸುವವರಿಗೆ ಕೊರೊನಾ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. 72 ಗಂಟೆಯೊಳಗೆ ನಡೆಸಿದ ಪರೀಕ್ಷಾ ವರದಿ ಕಡ್ಡಾಯವಾಗಿದೆ. 72 ಗಂಟೆ ಮೀರಿದ ವರದಿ ಪರಿಗಣಿಸಲಾಗುವುದಿಲ್ಲ” ಎಂದು ಜಿಲ್ಲಾಡಳಿತ ಸೂಚಿಸಿದೆ.
ಕಾಪು ಹೊಸ ಮಾರಿಗುಡಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ ಕಲ್ಯಾ ಆಯ್ಕೆ- vishwanews24
