ಮಂಗಳೂರು: ರೈತ ಶಕ್ತಿ ಯೋಜನೆಯಡಿ ರೈತ ಸಹಾಯಧನ – Vishwanews24
ಮಂಗಳೂರು: ರೈತ ಶಕ್ತಿ ಯೋಜನೆಯಡಿ ರೈತ ಸಹಾಯಧನ
ಮಂಗಳೂರು: 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚವನ್ನು ಕಡಿಮೆ ಮಾಡಲು ರೈತ ಶಕ್ತಿ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದೆ.
ಪ್ರತಿ ಎಕ್ರೆಗೆ 250 ರೂ.ಗಳಂತೆ ಗರಿಷ್ಠ 5 ಎಕ್ರೆಗೆ ಮೀರದಂತೆ 1,250ರೂ. ಗಳವರೆಗೆ ಡಿ.ಬಿ.ಟಿ ಮೂಲಕ ಸಹಾಯಧನ ನೀಡಲು ಯೋಜಿಸಿದ್ದು,
ಈ ಯೊಜನೆಯಡಿ ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹಿಡುವಳಿ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಸಹಾಯಧನವನ್ನು ನೀಡಲಾಗುವುದು.
ಪ್ರತಿಯೊಬ್ಬ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಖಡ್ಡಾಯವಾಗಿ ನೋಂದಾಣಿಯಾಗಿ ತಮ್ಮ ಎಲ್ಲಾ ಸರ್ವೇ ನಂಬರ್‍ಗಳನ್ನು ನೋಂದಣಿ ಮಾಡಿಸಬೇಕು.
ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾದ ಭೂ ಹಿಡುವಳಿಯ ಆಧಾರದ ಮೇಲೆ ಗರಿಷ್ಠ ಸಹಾಯಧನ ನೀಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ್ಪೆ: ಸೈಕ್ಲೋನ್ ಪ್ರಭಾವ – ಫ್ಲೋಟಿಂಗ್ ಬ್ರಿಡ್ಜ್ ಮೂರು ದಿನ ತಾತ್ಕಾಲಿಕವಾಗಿ ಸ್ಥಗಿತ – Vishwanews24
