ಮಲ್ಪೆ: ಸೈಕ್ಲೋನ್ ಪ್ರಭಾವ  – ಫ್ಲೋಟಿಂಗ್ ಬ್ರಿಡ್ಜ್  ಮೂರು ದಿನ ತಾತ್ಕಾಲಿಕವಾಗಿ ಸ್ಥಗಿತ – Vishwanews24

Featured, ಉಡುಪಿ
  • ಮಲ್ಪೆ: ಸೈಕ್ಲೋನ್ ಪ್ರಭಾವ  – ಫ್ಲೋಟಿಂಗ್ ಬ್ರಿಡ್ಜ್  ಮೂರು ದಿನ ತಾತ್ಕಾಲಿಕವಾಗಿ ಸ್ಥಗಿತ

  • ಸುರಕ್ಷತೆಯ ದೃಷ್ಠಿಯಿಂದ ಸೆಂಟರ್ ಲಾಕ್ ವ್ಯವಸ್ಥೆಯನ್ನು ತೆಗೆದಿಡಲಾಗಿದೆ

  • ಸೇತುವೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಯಾವುದೇ ತೊಂದರೆಗಳು ಆಗಿಲ್ಲ..

  • ತೇಲುವ ಸೇತುವೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ..

  • ಪ್ರವಾಸಿಗರು ಹಾಗೂ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು..

  • ಸೈಕ್ಲೋನ್ ಪ್ರಭಾವ ಕಡಿಮೆ ಆದ ಬಳಿಕ ಮತ್ತೆ ಆರಂಭ 

  • ವದಂತಿಗಳಿಗೆ ಸ್ಪಷ್ಟನೆ ನೀಡಿದ ಮಲ್ಪೆ ಬೀಚ್ ಅಭಿವೃದ್ಧಿ ನಿರ್ವಹಣಾ ಸಮಿತಿ ಉಸ್ತುವಾರಿ ಸುದೇಶ್ ಶೆಟ್ಟಿ

ಉಡುಪಿ : ಸಮುದ್ರದಲ್ಲಿ ಸೈಕ್ಲೋನ್ ನಿಂದಾಗಿ ಉಂಟಾಗಿರುವ ಅಲೆಗಳ ಅಬ್ಬರದಿಂದಾಗಿ ಮುಂಜಾಗೃತಾ ಕ್ರಮವಾಗಿ ಮಲ್ಪೆ ಬೀಚ್‍ನಲ್ಲಿ ನೂತನವಾಗಿ ಆರಂಭಗೊಂಡಿರುವ ತೇಲುವ ಸೇತುವೆ ಸೇರಿದಂತೆ ಜಲ ಕ್ರೀಡೆಗಳನ್ನು ಮೂರು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ನಿರ್ವಹಣಾ ಸಮಿತಿ ಉಸ್ತುವಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಲ್ಪೆ ಬೀಚ್ ನಲ್ಲಿ ಇತ್ತೀಚೆಗೆ ಅರಂಭಗೊಂಡಿರುವ ತೇಲುವ ಸೇತುವ (ಫ್ಲೋಟಿಂಗ್ ಬ್ರಿಡ್ಜ್) ನ ಕುರಿತಾಗಿ ಹಬ್ಬಿರು ವದಂತಿಗಳಿಗೆ ಸ್ಪಷ್ಟನೆ ನೀಡಿ ಪ್ರತಿಕ್ರಿಯೆ ನೀಡಿದ ಅವರು, ಈ ಸೇತುವೆಯಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸೆಂಟರ್ ಲಾಕ್ ವ್ಯವಸ್ಥೆಯನ್ನು ತೆಗೆದಿಡಲಾಗಿದೆ. ಇದರಿಂದಾಗಿ ಸೇತುವೆಯ ಕೆಲವು ಬ್ಲಾಕ್‍ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಆದರೆ ಜನರು ಇದನ್ನು ತಪ್ಪಾಗಿ ಗ್ರಹಿಸಿಕೊಂಡು ವಂದತಿಗಳನ್ನು ಹಬ್ಬಿಸುತ್ತಿದ್ದಾರೆ. ಸೇತುವೆ ತುಂಡಾಗಿದೆ, ಸುರಕ್ಷಿತವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಸೇತುವೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಯಾವುದೇ ತೊಂದರೆಗಳು ಆಗಿಲ್ಲ. ತೇಲುವ ಸೇತುವೆಗೂ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ತೇಲುವ ಸೇತುವೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರವಾಸಿಗರು ಹಾಗೂ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು ಎಂದು ತಿಳಿಸಿದರು.

ಇನ್ನು ಸೈಕ್ಲೋನ್ ಪ್ರಭಾವದಿಂದಾಗಿ ಸದ್ಯ ಮಲ್ಪೆ ಬೀಚ್ ನಲ್ಲಿ ತೇಲುವೆ ಸೇತುವೆ ಜೊತೆಗೆ ಇತರ ಜಲ ಕ್ರೀಡೆ ಹಾಗೂ ದ್ವೀಪ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು ಸೈಕ್ಲೋನ್ ಪ್ರಭಾವ ಕಡಿಮೆ ಆದ ಬಳಿಕ ಮತ್ತೆ ಆರಂಭಿಸಲಾಗುವುದು ಎಂದು ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಲ್ಪೆ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅಳವಡಿಸಲಾಗಿದ್ದ ಫ್ಲೋಟಿಂಗ್‌ ಬ್ರಿಡ್ಜ್‌ ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರ ಪಾಲು – Vishwanews24

Leave a Reply