ಮಲ್ಪೆ ಬೀಚ್ – ಲೈಫ್ ಗಾರ್ಡ್ ಗಳ ಮೇಲೆ ಹಲ್ಲೆ ನಡೆಸಿದ ಪ್ರವಾಸಿಗರು – Vishwanews24

Featured, ಉಡುಪಿ

ಮಲ್ಪೆ ಬೀಚ್ – ಲೈಫ್ ಗಾರ್ಡ್ ಗಳ ಮೇಲೆ ಹಲ್ಲೆ ನಡೆಸಿದ ಪ್ರವಾಸಿಗರು

ಉಡುಪಿ : ಕಡಲು ಪ್ರಕ್ಷುಬ್ದ ಇರುವ ಹಿನ್ನಲೆ ಸಮುದ್ರ ಇಳಿಯಬೇಡಿ ಎಂದು ಬುದ್ದಿಹೇಳಿದ ಮಲ್ಪೆ ಬೀಚ್‌ನಲ್ಲಿ ಲೈಫ್‌ಗಾರ್ಡ್‌ ಗಳು ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಮೇ 9ರಂದು ಅಪರಾಹ್ನ ಸುಮಾರು 6 ಜನ ಪ್ರವಾಸಿಗರು ಮಲ್ಪೆ ಬೀಚ್ ಲೈಫ್‌ಗಾರ್ಡ್‌ಗಳ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದರು. ಹವಮಾನ ವೈಪರೀತ್ಯವಿದ್ದು ಕಡಲು ಪ್ರಕ್ಷುಬ್ದಗೊಂಡಿದ್ದು, ಜಿಲ್ಲಾಧಿಕಾರಿ ಗಳು ೨ ದಿನ ಯಾರನ್ನು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಪ್ರವಾಸಿಗರಿಗೆ ತಿಳಿಹೇಳಿದರೂ ನಾವು ತುಂಬಾ ದೂರದಿಂದ ಬಂದಿದ್ದೇವೆ. ಯಾಕೆ ನೀರಿಗೆ ಇಳಿಯಬಾರದು ನೀವು ಮಾಡುವುದು ಮಾಡಿ ಎಂದು ಉಡಾಫೆ ತೋರಿ ಅವಾಚ್ಯ ಶಬ್ದಗಳಿಂದ ಬೈದು ಲೈಫ್‌ಗಾರ್ಡ್ ಗಳಾದ ನಾಗರಾಜ, ಅಭಯ್, ರಾಜೇಶ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.

ಮೇ.14 ರಂದು ಕಾಪುದ ಪಿಲಿಕೋಲ – Vishwanews24

Leave a Reply