ವಿದ್ಯುತ್ ಸ್ಪರ್ಶದಿಂದ ಜೂನಿಯರ್ ರವಿಚಂದ್ರನ್ ಖ್ಯಾತಿಯ ಲಕ್ಮೀ ನಾರಾಯಣ ಸಾವು – Vishwanews24

Featured, ರಾಜ್ಯ ನ್ಯೂಸ್

ವಿದ್ಯುತ್ ಸ್ಪರ್ಶದಿಂದ ಜೂನಿಯರ್ ರವಿಚಂದ್ರನ್ ಖ್ಯಾತಿಯ ಲಕ್ಮೀ ನಾರಾಯಣ ಸಾವು

ಕುಣಿಗಲ್ : ಕ್ರೇಜಿಸ್ಟಾರ್‌ ರವಿಚಂದ್ರನ್‌ರನ್ನು ಹೋಲುವ, ಜ್ಯೂನಿಯರ್‌ ರವಿಚಂದ್ರನ್‌ ಎಂದೇ ಖ್ಯಾತಿಗಳಿಸಿದ್ದ ಲಕ್ಮೀ ನಾರಾಯಣ ಎಂಬವರು ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಹೇರೂರು ಗ್ರಾಮದ ಲಕ್ಷ್ಮೀ ನಾರಾಯಣ್ (35) ಇಂದು ತಮ್ಮ ಮನೆಯಲ್ಲಿರುವ ಸಂಪ್ ಗೆ ನೀರು ಬಿಡಲು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕರೆಂಟ್ ಶಾಕ್ ನಿಂದ ಲಕ್ಷ್ಮೀ ನಾರಾಯಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇವರು ತುಮಕೂರಿನ ಆರ್ಕೆಸ್ಟ್ರಾವೊಂದರಲ್ಲಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀ ನಾರಾಯಣ್ ರಾಜ್ಯದೆಲ್ಲೆಡೆ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡು ಹೇಳಿ ಜನರನ್ನು ರಂಜಿಸುತ್ತಿದ್ದರು. ಜೊತೆಗೆ ರವಿಚಂದ್ರನ್ ಅವರಂತೆಯೇ ಕಾಣುತ್ತಿದ್ದ ಅವರು ರವಿಚಂದ್ರನ್ ಅಭಿನಯದ ದೃಶ್ಯಗಳನ್ನು ವೇದಿಕೆ ಮೇಲೆ ಅಭಿನಯಿಸುವ ಮೂಲಕ ಜನರ ಮನಗೆದ್ದಿದ್ದರು.

ಸ್ಯಾಂಡಲ್‌ವುಡ್ ಹಿರಿಯ ನಟ ರವಿಚಂದ್ರನ್ ಹೋಲುವ ಲಕ್ಷ್ಮೀನಾರಾಯಣ್ ಅವರ ರೀತಿಯಲ್ಲಿಯೇ ವೇಷಭೂಷಣ ಧರಿಸಿಕೊಳ್ಳುತ್ತಿದ್ದರು. ಇವರು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದರು.

ಮಲ್ಪೆ ಬೀಚ್ – ಲೈಫ್ ಗಾರ್ಡ್ ಗಳ ಮೇಲೆ ಹಲ್ಲೆ ನಡೆಸಿದ ಪ್ರವಾಸಿಗರು – Vishwanews24

Leave a Reply