ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್‌ ಅಟ್ಟಹಾಸ : ಕರೋನ ನೆಗೆಟಿವ್‌ ವರದಿಯೊಂದಿಗೆ ಮಾತ್ರ ಕರ್ನಾಟಕ ಎಂಟ್ರಿ -Vishwanews24

Featured, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಮಹಾರಾಷ್ಟ್ರ, ಕೇರಳದಲ್ಲಿ ಮತ್ತೆ ಕೋವಿಡ್‌ ಅಟ್ಟಹಾಸ : ಕರೋನ ನೆಗೆಟಿವ್‌ ವರದಿಯೊಂದಿಗೆ ಮಾತ್ರ ಕರ್ನಾಟಕ ಎಂಟ್ರಿ -Vishwanews24

ಮಂಗಳೂರು: ಕೇರಳ, ಮಹಾರಾಷ್ಟ್ರದಲ್ಲಿ ಕರೋನ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈ ಎರಡು ರಾಜ್ಯಗಳಿಂದ ಬರೋ ಜನರಿಗೆ ಕಳೆದ 74 ಘಂಟೆಗಳಲ್ಲಿ ನಡೆಸಿರುವ ಕರೋನ ಟೆಸ್ಟ್‌ನ ವರದಿಯನ್ನು ಇಟ್ಟುಕೊಂಡು ಕರ್ನಾಟಕದ ಗಡಿಯತ್ತ ಬರಬೇಕು ಅಂತ ಹೇಳಿದೆ.

ಪ್ರಾರಂಭದಲ್ಲಿ ಬೆಳಗಾವಿ/ಮೈಸೂರು/ವಿಜಯಪುರ/ಮಂಗಳೂರು ಗಡಿ ಭಾಗದಲ್ಲಿ ಅಧಿಕಾರಿಗಳು ಬೇಕಾ ಬಿಟ್ಟಿಯಲ್ಲಿ ಜನತೆಯನ್ನು ಬಿಡುತ್ತಿದ್ದರು, ಈ ಬಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಬೆನ್ನಲೇ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಕೂಡಲೇ ಗಡಿ ಭಾಗದಲ್ಲಿ ತನಿಖಾ ತಂಡವನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ ಕೆಲಸ ಮಾಡಲು ಮುಂದಾಗಿದೆ.