ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಿ ಮುಸಲ್ಮಾನರ ತಂಟೆಗೆ ಯಾರು ಬರುತ್ತಾರೆ ನೋಡೋಣ : ಎಚ್‌.ಡಿ.ಕುಮಾರಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಿ ಮುಸಲ್ಮಾನರ ತಂಟೆಗೆ ಯಾರು ಬರುತ್ತಾರೆ ನೋಡೋಣ : ಎಚ್‌.ಡಿ.ಕುಮಾರಸ್ವಾಮಿ

ಬಾಳೆಹೊನ್ನೂರು : ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷಗಳು ಮುಸಲ್ಮಾನರನ್ನು ನೆಮ್ಮದಿಯಾಗಿ ಇರಲು ಬಿಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಿ. ನಿಮ್ಮ ತಂಟೆಗೆ ಯಾರು ಬರುತ್ತಾರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಜೇಸಿ ವೃತ್ತದಲ್ಲಿ ಜೆಡಿಎಸ್‌ ಭಾನುವಾರ ಆಯೋಜಿಸಿದ್ದ ಪಂಚರತ್ನ ರಥ ಯಾತ್ರೆ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಇಂದು ರಾಜ್ಯವನ್ನು ಕಟ್ಟಬೇಕಾಗಿರುವುದು ರಕ್ತದ ಓಕುಳಿ ಆಡಲು, ಬಡವರ ಬದುಕಿನ ಜೊತೆ ಚೆಲ್ಲಾಟ ಆಡಲು ಅಲ್ಲ. ಜನಸಾಮಾನ್ಯರ ಬದುಕು ಕಟ್ಟಲು ಎಂದರು.

ರಾಜ್ಯದ ಹಲವಾರು ಹಳ್ಳಿಗಳಲ್ಲಿ ರೈತರ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಯಾರೂ ಕೇಳದಂತಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷ ಪಂಚರತ್ನ ಯಾತ್ರೆ ಆಯೋಜಿಸಿದೆ. ಈ ಯೋಜನೆ ಮಾಡಲು ಯಾವುದೇ ಆರ್ಥಿಕ ತಜ್ಞರು ಹೇಳಿಲ್ಲ. ರಾಜ್ಯದ ರೈತರು, ಮಹಿಳೆಯರು, ಯುವಜನರ ಸದುದ್ದೇಶದ ಕಾರಣ ಯೋಜನೆ ಆಯೋಜಿಸಿದೆ ಎಂದು ಹೇಳಿದರು. ಜೆಡಿಎಸ್‌ ಪಕ್ಷಕ್ಕೆ 5 ವರ್ಷ ಸಂಪೂರ್ಣ ಆಡಳಿತ ನಡೆಸಲು ಅವಕಾಶ ನೀಡಿದರೆ ಯಾವುದೇ ಧರ್ಮ, ಜಾತಿಯ ಸೋಂಕಿಲ್ಲದೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ವಿರೋಧಿಸಿದ್ದವು ಎಂದರು.

ಚುನಾವಣೆ ಹತ್ರ ಬಂದಾಗ ಕರ್ನಾಟಕ ನೆನಪಾಗುತ್ತದೆ : ಮೋದಿ ವಿರುದ್ಧ ದಿನೇಶ್‌ ಗುಂಡೂರಾವ್‌ ವಾಗ್ದಾಳಿ – Vishwanews24

ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಒತ್ತುವರಿ, ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕಸ್ತೂರಿ ರಂಗನ್‌ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗುವುದು. 6 ತಿಂಗಳಲ್ಲಿ ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಲಾಗುವುದು. ಇಲ್ಲದಿದ್ದರೆ ರೈತರ ಜೀವನ ಉಳಿಯಲ್ಲ. ಅಡಕೆ ಬೆಳೆಗಾರರ ಜೀವನ ಉಳಿಯಬೇಕು ಎಂಬುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರವು ರೈತರ ಮೇಲೆ ಪ್ರಹಾರ ಮಾಡಲು ಹೊರಟಿದ್ದು, ಭೂತಾನ್‌ನಿಂದ ಅಡಕೆ ಆಮದಿಗೆ ಅವಕಾಶ ನೀಡಿದ್ದಾರೆ. ರೈತ ವಿರೋಧಿ ಸಾಹುಕಾರ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.

ಈ ಸಂದರ್ಭದಲ್ಲಿ ಶೃಂಗೇರಿ ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಸುಧಾಕರ್‌ ಎಸ್‌.ಶೆಟ್ಟಿ, ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಮುಖಂಡರಾದ ಕೆ.ಎನ್‌.ಮರಿಗೌಡ ಕೊಳಲೆ, ಕೆ.ಆರ್‌.ದೀಪಕ್‌, ಕೆ.ಟಿ.ಗೋವಿಂದೇಗೌಡ, ಗೋವಿಂದರಾಜು, ಕೆ.ಸಿ.ವೆಂಕಟೇಶ್‌, ಉದಯ್‌ ಸುವರ್ಣ, ಕುಂಚೂರು ವಾಸು, ಅನಿಲ್‌ ನಾರ್ವೆ, ಶಿವಶಂಕರ್‌ ಇದ್ದರು.

ವಿಟ್ಲ: ಮಲಗಿದಲ್ಲೇ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ :  ಪತ್ನಿಯೇ ಕತ್ತು ಹಿಸುಕಿ ಕೊಲೆ – Vishwanews24

Leave a Reply