ಮೂಡುಬಿದಿರೆ: 19ನೇ ವರ್ಷದ ‘ಕೋಟಿ- ಚೆನ್ನಯ’ ಜೋಡುಕರೆ ಕಂಬಳೋತ್ಸವಕ್ಕೆ ಸಂಭ್ರಮದ ಚಾಲನೆ – Vishwanews24

Featured, ದಕ್ಷಿಣ ಕನ್ನಡ

ಮೂಡುಬಿದಿರೆ: 19ನೇ ವರ್ಷದ ‘ಕೋಟಿ- ಚೆನ್ನಯ’ ಜೋಡುಕರೆ ಕಂಬಳೋತ್ಸವಕ್ಕೆ ಸಂಭ್ರಮದ ಚಾಲನೆ – Vishwanews24

ಮೂಡುಬಿದಿರೆ: ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಜೋಡುಕರೆಯಲ್ಲಿ 19ನೇ ವರ್ಷದ ಹೊನಲು ಬೆಳಕಿನ ಕಂಬಳಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು.

ಕ್ರೈಸ್ತ ಧರ್ಮಗುರು ವಂ.ವಾಲ್ಟರ್ ಡಿಸೋಜ, ಆಲಂಗಾರು ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಈಶ್ವರ ಭಟ್, ಪುತ್ತಿಗೆ ನೂರಾನಿ ಮಸೀದಿ ಧರ್ಮಗುರು ಜಿಯಾವುಲ್ಲ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ‌ ಎಂ. ಕಂಬಳ ಉದ್ಘಾಟಿಸಿದರು.

‘ಪದ್ಮಶ್ರೀ’ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋ ಅವರನ್ನು ಸನ್ಮಾನಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ‌ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಮೂಡುಬಿದಿರೆ ಕಂಬಳ ಸಮಿತಿ ಕೋಶಾಧಿಕಾರಿ ಭಾಸ್ಕರ್ ಎಸ್.ಕೋಟ್ಯಾನ್, ಕಂಬಳ ಬಹುಭಾಷ ಸಿನಿಮಾ ನಿರ್ದೇಶಕ ರಾಜೇಂದ್ರಬಾಬು ಸಿಂಗ್, ನಟ ಗೋಪಿನಾಥ್ , ಬಿಜೆಪಿ ಜಿಲ್ಲಾಧ್ಯಕ್ಣ ಸುದರ್ಶನ್ ಎಂ. ಉಪಸ್ಥಿತರಿದ್ದರು.

ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪೂಜಾರಿ ; ಮಹಿಳೆ ಸಾವು – Vishwanews24