ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ : ಸಿನಿಮಾಗಳಿಂದ ತಾತ್ಕಾಲಿಕ ಬ್ರೇಕ್ – vishwanews24

Featured, ರಾಷ್ಟ್ರ ನ್ಯೂಸ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ  ; ಸಿನಿಮಾಗಳಿಂದ ತಾತ್ಕಾಲಿಕ ಬ್ರೇಕ್

ನಟಿ ಸಮಂತಾ  ರುತ್ ಪ್ರಭು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮಾ ಇಂಟಿ ಬಂಗಾರಂ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿ, ಗರ್ಭಧಾರಣೆ ಕುರಿತ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: 

ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ – vishwanews24

ಮಾ ಇಂಟಿ ಬಂಗಾರಂ ಚಿತ್ರದ ಯಶಸ್ಸಿನ ಸಮಾರಂಭದಲ್ಲಿ ಮಾತನಾಡಿದ ಸಮಂತಾ, ಸದ್ಯದ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ಸ್ವಲ್ಪ ವಿರಾಮ ಪಡೆಯುವುದಾಗಿ ತಿಳಿಸಿದರು. ಮಾ ಇಂಟಿ ಬಂಗಾರಂ ಚಿತ್ರದ ಬಳಿಕ ನನ್ನ ಆರೋಗ್ಯದ ಕಾರಣದಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬೇಕಿದೆ. ನನ್ನ ಮತ್ತು ಮಗುವಿನ ಆರೈಕೆ ತೆಗೆದುಕೊಳ್ಳಬೇಕು. ನಂತರ ಮತ್ತೆ ಅಭಿಮಾನಿಗಳಿಗಾಗಿ ಹೊಸ ಚಿತ್ರದೊಂದಿಗೆ ವಾಪಸ್ ಬರುತ್ತೇನೆ ಎಂದು ಸಮಂತಾ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಮಂತಾ ಗರ್ಭಿಣಿ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಮಾ ಇಂಟಿ ಬಂಗಾರಂ ಚಿತ್ರದ ಯಶಸ್ಸಿನ ಸಂಭ್ರಮದ ವೇಳೆ ಹಂಚಿಕೊಂಡಿದ್ದ ಕೆಲವು ವಿಡಿಯೋಗಳು ಈ ಚರ್ಚೆಗೆ ಕಾರಣವಾಗಿದ್ದವು.

ಇದನ್ನೂ ಓದಿ: 

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಮತ್ತೆ ಆರಂಭ ; ಗುರುತಿನ ಚೀಟಿ, ಶುಲ್ಕ ಕಡ್ಡಾಯ – vishwanews24

ಸಮಂತಾ ಮತ್ತು ರಾಜ್ ನಿಡಿಮೋರು 2025ರ ಡಿಸೆಂಬರ್ 1ರಂದು ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯ ಫೋಟೋಗಳನ್ನು ಕೂಡ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇವರಿಬ್ಬರ ಸ್ನೇಹ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ವೇಳೆ ಆರಂಭವಾಗಿತ್ತು. ಬಳಿಕ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ, ಇತ್ತೀಚೆಗೆ ಮಾ ಇಂಟಿ ಬಂಗಾರಂ ಚಿತ್ರದಲ್ಲೂ ಜೊತೆಯಾಗಿ ಕೆಲಸ ಮಾಡಿದ್ದರು

Leave a Reply