ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ , ಸುಮ್ಮನೇ ಆರೋಪ ಮಾಡುವುದು ಬೇಡ :ಪೇಜಾವರ ಶ್ರೀ -Vishwanews24

Featured, ಉಡುಪಿ

ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ , ಸುಮ್ಮನೇ ಆರೋಪ ಮಾಡುವುದು ಬೇಡ :ಪೇಜಾವರ ಶ್ರೀ -Vishwanews24

ಉಡುಪಿ, : “ರಾಮಮಂದಿರಕ್ಕೆ ಹಣ ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದು, ”ರಾಮ ಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತಿಗೆ ಸೂಚಿಸಿಲ್ಲ” ಎಂದು ಹೇಳಿದರು.

ಮುಂಬೈ:ಕೋವಿಡ್‌ 19 ನಿಯಮಗಳನ್ನು ಪಾಲಿಸದಿದ್ದರೆ ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗುವುದು : ಉದ್ಧವ್‌ ಠಾಕ್ರೆ -Vishwanews24

ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ”ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮಾಹಿತಿ ಸಂಗ್ರಹಿಸಿ ಇರಿಸುವಂತೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆಗಲಿ ಅಥವಾ ಆರ್‌ಎಸ್‌ಎಸ್‌ ಆಗಲಿ ಯಾವುದೇ ಸೂಚನೆ ನೀಡಿಲ್ಲ. ದೇಣಿಗೆ ಕೊಟ್ಟವರ ಮಾಹಿತಿ ಮಾತ್ರ ಟ್ರಸ್ಟ್‌ಗೆ ಅಗತ್ಯವಾದುದು, ಆದ್ದರಿಂದ ಸಂಗ್ರಹಿಸುತ್ತಾರೆ” ಎಂದು ಸ್ಪಷ್ಟಪಡಿಸಿದರು.

ಮಂಗಳೂರು: ಎ‌.ಜೆ ಆಸ್ಪತ್ರೆ ಹಾಗೂ ಯೆನೆಪೋಯ ಆಸ್ಪತ್ರೆ ಮಾಲೀಕರ ಮನೆ ಮೇಲೆ ಐಟಿ ದಾಳಿ -Vishwanews24

”ರಾಮ ಮಂದಿರ ನಿರ್ಮಾಣಕ್ಕಾಗಿ ನಿರೀಕ್ಷೆಗೂ ಅಧಿಕ ದೇಣಿಗೆ ಸಂಗ್ರಹವಾಗುತ್ತಿದೆ. ಅದರಿಂದಾಗಿ ಈಗ ದೇಣಿಗೆ ಸ್ವೀಕಾರ ರಶೀದಿ ಹಾಗೂ ಕೂಪನ್‌ಗಳ ಕೊರತೆ ಎದುರಾಗಿದೆ. ಹಾಗಾಗಿ ಮುಂದೆ ದೇಣಿಗೆ ಪಡೆಯಲು ಅನುಕೂಲವಾಗಲಿ ಎಂದು ಮನೆಗಳಿಗೆ ಗುರುತು ಹಾಕಿರಬಹುದು. ಹಾಗೆ ಮಾಡಿದ್ದರೆ. ಅದರು ತಪ್ಪೇನಲ್ಲ” ಎಂದು ಸಮರ್ಥಿಸಿಕೊಂಡರು.

”ಹೆಚ್‌ ಡಿ ಕುಮಾರಸ್ವಾಮಿ ಅವರು ಮಾಡಿರುವುದು ಗಂಭೀರ ಆರೋಪ. ಅದಕ್ಕೆ ಬೇಕಾದ ಸಾಕ್ಷ್ಯ ಅವರು ನೀಡಿ ಆರೋಪ ಮಾಡಬೇಕು. ಸುಮ್ಮನೇ ರಾಮ ಮಂದಿರ ಆರೋಪ ಮಾಡುವುದು ಬೇಡ” ಎಂದು ಹೇಳಿದರು.

ಮಂಗಳೂರಿನಲ್ಲಿ ನಮ್ಮ ಕುಡ್ಲ ಟಾಕೀಸ್ ಆರಂಭ : ಇನ್ನು ಮನೆಯಲ್ಲೇ ಕುಳಿತು ಹೊಸ ತುಳು ಸಿನಿಮಾ ನೋಡುವ ಅವಕಾಶ -Vishwanews24