ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ , ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ : ಕೆ ಎಸ್ ಈಶ್ವರಪ್ಪ – Vishwanews24

Featured, ರಾಜ್ಯ ನ್ಯೂಸ್

ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ..

ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ..

ಸಾವಿಗೆ ಮುನ್ನವೇ ವಾಟ್ಸಾಪ್ ನಲ್ಲಿ ಡೆತ್ ನೋಟ್ ಕಳಿಸಿದ್ದು ಯಾರು ಎನ್ನುವ ಬಗ್ಗೆಯೂ ತನಿಖೆಯಾಗಬೇಕು ..

ಸಂತೋಷ್ ಆತ್ಮಹತ್ಯೆ ಪ್ರಕರಣದ ಸಂಬಂಧ ಕೂಲಂಕುಶವಾಗಿ ತನಿಖೆ ನಡೆಸಬೇಕು

ಶಿವಮೊಗ್ಗ: ನಮ್ಮ ಇಲಾಖೆಯಿಂದ ಅವರಿಗೆ ವರ್ಕ್ ಆರ್ಡರ್ ಕೊಟ್ಟಿಲ್ಲವೆಂದು ಸ್ಪಷ್ಟವಾಗೇ ಹೇಳಲಾಗಿದೆ. ಹೀಗಿದ್ದೂ ನನ್ನ ವಿರುದ್ಧ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಕ್ಷದವರು ಒತ್ತಾಯಿಸುತ್ತಿದ್ದಾರೆ. ಯಾವುದೇ ದಾಖಲೆ ಇಲ್ಲದೇ ನಾನು ರಾಜೀನಾಮೆ ನೀಡೋ ಪ್ರಶ್ನೆ ಉದ್ಭವಿಸೋದಿಲ್ಲ.

ಹೀಗಾಗಿ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಬವಿಸೋದಿಲ್ಲ. ಇದೇ ಮಾತನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ, ಸಿಎಂ ಬಸವರಾಜ ಬೊಮ್ಮಾಯಿಗೂ ತಿಳಿಸಿದ್ದೇನೆ. ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ. ಈ ಕಾರಣಕ್ಕೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ನಡೆದಂತ ವಿಚಾರದ ಬಗ್ಗೆ ಇವತ್ತು ಕಾಂಗ್ರೆಸ್ ನವರು ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿದ್ದಾರೆ. ಎರಡನೆಯದು ಡೆತ್ ನೋಟೇ ಬರೆದಿಲ್ಲ. ಡೆತ್ ನೋಟ್ ಬರದೇ ಇದ್ದರೂ ಬರೆದಿದ್ದಾರೆ ಎಂದು ಸುಳ್ಳು ಮಾಹಿತಿ ಹಬ್ಬಿಸಿ, ಮತ್ತೆ ರಾಜೀನಾಮೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದ್ರೇ, ಮೊದಲು ಆಡಳಿತಾತ್ಮಕ ಅನುಮೋದನೆ, ಟೆಕ್ನಿಕಲ್ ಅನುಮೋದನೆ, ಸ್ಯಾಂಕ್ಷನ್ ಮಾಡಬೇಕು. ವರ್ಕ್ ಆರ್ಡರ್ ಇಷ್ಯೂವಾಗಬೇಕು. ಈ ಎಲ್ಲಾ ಮುಗಿದ ನಂತ್ರ ಕೆಲಸ ಮುಗಿದ ಮೇಲೆ ಬಿಲ್ ಹಣ ಬಿಡುಗಡೆಯಾಗಬೇಕು ಎಂದರು.

ಉಡುಪಿ : ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಕೆಎಂಸಿ ಗೆ – ಶಿಫ್ಟ್ ಗೆ ತಯಾರಿ – Vishwanews24

ಇಷ್ಟು ವರ್ಷ ನೀವು ಆಡಳಿತ, ಅಧಿಕಾರ ನಡೆಸಿದ್ದೀರಿ ಡಿಕೆ ಶಿವಕುಮಾರ್ ಅವರೇ, ಈ ಎಲ್ಲಾ ನಿಯಮವನ್ನು ಗಾಳಿಗೆ ತೂರಿ, ವರ್ಕ್ ಆರ್ಡರ್ ಕೂಡ ಕೊಡದೇ ಬಿಲ್ ಪೇಮೆಂಟ್ ಹೇಗೆ ಮಾಡಲಾಗುತ್ತೆ ಹೇಳಿ. ನಾನ್ ಯಾಕ್ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದ್ರೇ, ಎಲ್ಲಾ ಕಡೆಯಿಂದ ಪೋನ್ ಮಾಡಿ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ಅವರಿಗೆಲ್ಲ ನಾನು ಯಾವರೀತಿ ಕೃತಜ್ಞತೆ ಸಲ್ಲಿಸಬೇಕೋ ಗೊತ್ತಿಲ್ಲ ಎಂದರು.

ಗಣಪತಿಯವರ ಡೆತ್ ನೋಟ್ ಇಟ್ಟುಕೊಂಡು ಜಾರ್ಜ್ ಅವರ ರಾಜೀನಾಮೆ ನೀಡಲಾಗಿತ್ತು. ಆ ಡೆತ್ ನೋಟ್ ಅನ್ನು ಅವರೇ ಸ್ವತಹ ಬರೆದಿದ್ದರು. ಆ ಡೆತ್ ನೋಟ್ ಅವರ ಬಾಡಿಯ ಹತ್ತಿರವೇ ಇತ್ತು. ಆದ್ರೇ ಸಂತೋಷ್ ಪಾಟೀಲ್ ಡೆತ್ ನೋಟ್ ಅನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂಬುದಾಗಿ ಬರೆದಿದ್ದಾರೆ. ನಾನು ಎಲ್ಲೋ ಕುಳಿತು ಹೀಗೆ ಕಳಿಸಿದ್ರೇ ಯಾರಾದ್ರೂ ನಂಬುತ್ತಾರಾ ಎಂದರು.

ಕಾರ್ಕಳ: ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ : ವಾಹನ ಸೇರಿ 14 ಗೋವುಗಳ ರಕ್ಷಣೆ – Vishwanews24

ನಾನು ಟಿವಿಯಲ್ಲಿ ಅವರು ಮಾಡಿರುವಂತ ಆರೋಪದ ಬಗ್ಗೆ ಮಾನನಷ್ಟ ಮೊಕದ್ದಮ್ಮೆಯನ್ನು ಹಾಕಿದ್ದೇನೆ. ಅವರ ವಿರುದ್ಧ ಹಾಕಿದಂತ ಕೇಸ್ ಬಗ್ಗೆ ಕೋರ್ಟ್ ಅಕ್ಸೆಪ್ಟ್ ಮಾಡಿದೆ. ಸಂತೋಷ್ ಅವರಿಗೂ, ಮತ್ತೊಂದು ಖಾಸಗೀ ಚಾನಲ್ ಅವರಿಗೂ ಈ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆ. ದೆಹಲಿಗೆ ಹೋಗಿ ಬಂದವರು ಯಾಕೆ ನಿನ್ನೆ ಹೀಗೆ ಮಾಡಿಕೊಂಡರು ಎಂಬುದೇ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ಇಲಾಖೆಯಿಂದ ಅವರಿಗೆ ವರ್ಕ್ ಆರ್ಡರ್ ಕೊಟ್ಟಿಲ್ಲವೆಂದು ಸ್ಪಷ್ಟವಾಗೇ ಹೇಳಲಾಗಿದೆ. ಹೀಗಿದ್ದೂ ನನ್ನ ವಿರುದ್ಧ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಕ್ಷದವರು ಒತ್ತಾಯಿಸುತ್ತಿದ್ದಾರೆ. ಯಾವುದೇ ದಾಖಲೆ ಇಲ್ಲದೇ ನಾನು ರಾಜೀನಾಮೆ ನೀಡೋ ಪ್ರಶ್ನೆ ಉದ್ಭವಿಸೋದಿಲ್ಲ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಬವಿಸೋದಿಲ್ಲ. ಇದೇ ಮಾತನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ, ಸಿಎಂ ಬಸವರಾಜ ಬೊಮ್ಮಾಯಿಯವರಿಗೂ ತಿಳಿಸಿರೋದಾಗಿ ಹೇಳಿದರು.

ಸಂತೋಷ್ ಆತ್ಮಹತ್ಯೆ ಪ್ರಕರಣದ ಸಂಬಂಧ ಕೂಲಂಕುಶವಾಗಿ ತನಿಖೆ ನಡೆಸಬೇಕು. ದೆಹಲಿಗೆ ಅವರು ದೂರು ಕೋಡೋದಕ್ಕೆ ಹೋಗಿದ್ದೇಗೆ.? ಅವರು ಸಾವಿಗೆ ಮುನ್ನವೇ ವಾಟ್ಸಾಪ್ ನಲ್ಲಿ ಡೆತ್ ನೋಟ್ ಕಳಿಸಿದ್ದು ಯಾರು ಎನ್ನುವ ಬಗ್ಗೆಯೂ ಅಮೂಲಾಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ : ಸಂತೋಷ ಪಾಟೀಲ್ ಸಂಬಂಧಿಕ‌ ಪ್ರಶಾಂತ್ ಪಾಟೀಲ್ ಹೇಳಿಕೆ – Vishwanews24

Leave a Reply