ಹಿಂದಿ ಹೇರಿಕೆಯನ್ನು ತಮಿಳುನಾಡು ಬಿಜೆಪಿ ಒಪ್ಪುವುದಿಲ್ಲ : ಅಣ್ಣಾಮಲೈ – Vishwanews24

Featured, ರಾಷ್ಟ್ರ ನ್ಯೂಸ್

ಕೆಲಸ, ಶಿಕ್ಷಣ ಅಥವಾ ಉದ್ಯೋಗಕ್ಕೆ ಅಗತ್ಯವಿದ್ದವರು ಹಿಂದಿ ಕಲಿಯುತ್ತಾರೆ..

ಭಾರತೀಯರು ಎಂದು ಸಾಬೀತುಪಡಿಸಲು ಭಾಷೆ ಕಲಿಯುವ ಬಲವಂತ ಬೇಡ..

ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಗೆ ವಿರೋಧ..

ಚೆನ್ನೈ: ಹಿಂದಿ ಹೇರಿಕೆಯನ್ನು ತಮಿಳುನಾಡು ಬಿಜೆಪಿ ಒಪ್ಪುವುದಿಲ್ಲ ಎಂದು ಕೆ. ಅಣ್ಣಾಮಲೈ ಹೇಳಿದ್ದಾರೆ. ವಿವಿಧ ರಾಜ್ಯಗಳ ಜನರ ನಡುವಿನ ಸಂವಹನಕ್ಕೆ ಇಂಗ್ಲಿಷ್ ಬದಲು ಹಿಂದಿಯನ್ನು ಬಳಸಬೇಕು ಎಂಬ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಸಂದರ್ಭದಲ್ಲಿಯೇ ಅಣ್ಣಾಮಲೈ ಈ ಹೇಳಿಕೆ ನೀಡಿರುವುದು ಬಿಜೆಪಿಗೆ ಮುಜುಗರ ಉಂಟುಮಾಡಿದೆ.

ಏಪ್ರಿಲ್ 11ರಂದು ಕೇಂದ್ರ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (ಸಿಯುಇಟಿ) ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಕೂಡ ಮಾತನಾಡಿರುವ ಅಣ್ಣಾಮಲೈ, 2010ರಲ್ಲಿ ಸಿಯುಇಟಿ ಜಾರಿಗೊಳಿಸಿದ್ದಂತೆ ತಮಿಳು ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ‘ಭಾಷಾ ಯುದ್ಧ’ದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಪಕ್ಷವು ಹಿಂದಿ ಹೇರಿಕೆ ಒಪ್ಪುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಹಿಂದಿ ಹೇರಿಕೆಯನ್ನು ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಬಹಳ ಸ್ಪಷ್ಟವಾಗಿ ತಿಳಿಸಿದೆ” ಎಂದಿದ್ದಾರೆ.

ವಾಟ್ಸಾಪ್ ಬರಹ ಡೆತ್ ನೋಟ್ ಅಲ್ಲ , ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ : ಕೆ ಎಸ್ ಈಶ್ವರಪ್ಪ – Vishwanews24

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾಮಲೈ, “ಇಲ್ಲಿ ಯಾರಿಗೂ ಹಿಂದಿ ಬರುವುದಿಲ್ಲ. ನನಗೆ ಕೂಡ ಹಿಂದಿ ತಿಳಿದಿಲ್ಲ. ಯಾರಿಗಾದರೂ ಅದು ಕೆಲಸ, ಶಿಕ್ಷಣ ಅಥವಾ ಉದ್ಯಮಕ್ಕೆ ಅಗತ್ಯವಾಗಿದ್ದರೆ, ಅದನ್ನು ಅವರು ಕಲಿಯಬಹುದು. ನಾವು ಭಾರತೀಯರು ಎಂದು ಸಾಬೀತುಪಡಿಸಲು ಭಾಷೆಯೊಂದನ್ನು ಕಲಿಯುವಂತೆ ನಮ್ಮನ್ನು ಯಾರೂ ಬಲವಂತಪಡಿಸುವ ಅಗತ್ಯವಿಲ್ಲ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

“ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸಬೇಕು ಎಂದು 1965ರಲ್ಲಿ ಕಾಂಗ್ರೆಸ್ ಕಾನೂನು ಜಾರಿಗೆ ತಂದಿತ್ತು. 1986ರಲ್ಲಿ ಮತ್ತೊಮ್ಮೆ, ಎರಡನೇ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಿಕೆಗೆ ಪ್ರಯತ್ನ ಮಾಡಲಾಯಿತು” ಎಂದು ಆರೋಪಿಸಿದ್ದಾರೆ.

ಉಡುಪಿ : ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಕೆಎಂಸಿ ಗೆ – ಶಿಫ್ಟ್ ಗೆ ತಯಾರಿ – Vishwanews24

Leave a Reply