ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಾಪು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸುಧಾಕರ್- Vishwanewd24

Featured, ಉಡುಪಿ

ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಾಪು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸುಧಾಕರ್

ಕಾಪು: ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸುಧಾಕರ್ ತನ್ನ ಹುಟ್ಟು ಹಬ್ಬವನ್ನು ತನ್ನ ಬೀಟ್ ನ ಬಡ ಕುಟುಂಬಕ್ಕೆ ದಿನಸಾಮಗ್ರಿ ಹಾಗೂ ಬಟ್ಟೆಬರೆಗಳನ್ನು ನೀಡುವ ಮೂಲಕ‌ ಕಷ್ಟಕ್ಕೆ ಸ್ಪಂದಿಸುವ ಮುಖಾಂತರ ವಿಶೇಷವಾಗಿ ಆಚರಿಸಿಕೊಂಡರು.
‌ಸುಧಾಕರ್ ಅವರು ಹಳೆಯ ಕೆಲವು ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ತರುವಲ್ಲಿ ಯಶಸ್ವಿಯಾಗಿ ಬಹುಮಾನದ ಮೆಚ್ಚುಗೆ ಪಡೆದಿದ್ದರು.
ಸದ್ಯ ವಿಶೇಷ ಹುಟ್ಟುಹಬ್ಬದ ಆಚರಣೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.