ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ – vishwanews24

Featured, ಉಡುಪಿ

ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ

ಶಿರ್ವ: ಶಿರ್ವ ಮತ್ತು ಕುತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹುಚ್ಚುನಾಯಿ ಹಾವಳಿ ಕಂಡುಬಂದಿದ್ದು, ಆ. 26 ರಂದು ಶಿರ್ವ ಮತ್ತು ಕುತ್ಯಾರು ಪರಿಸರದಲ್ಲಿ ವಿವಿಧೆಡೆ 5 ವರ್ಷದ ಮಗು ಸೇರಿ 5-6 ಮಂದಿ ಹುಚ್ಚುನಾಯಿ ಕಡಿತಕ್ಕೊಳಗಾಗಿದ್ದಾರೆ.

4 ಮಂದಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು, ಮಗು ಮತ್ತು ಗಂಭೀರ ಗಾಯಗೊಂಡ ಮತ್ತೋರ್ವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ – vishwanews24

ಶಿರ್ವ ಪೇಟೆಯ ಪೆಟ್ರೋಲ್ ಪಂಪ್ ಬಳಿ ಓರ್ವ ಬ್ಯಾಂಕ್ ಅಧಿಕಾರಿಗೆ ಹುಚ್ಚುನಾಯಿ ಕಡಿದಿದ್ದು, ಆ ಪರಿಸರದಲ್ಲಿಯೇ ಮತ್ತೋರ್ವ ಬೈಕ್ ಸವಾರನಿಗೆ ಬೈಕ್‌ನಲ್ಲಿ ಚಲಿಸುತ್ತಿದ್ದಂತೆಯೇ ನಾಯಿ ಕಡಿದಿದೆ.

ಶಿರ್ವ ಕೊಲ್ಲಬೆಟ್ಟು ಜೀವನ್ ಆಶಾ ಟ್ರಸ್ಟ್ ಬಳಿ ಕೊಲ್ಲಬೆಟ್ಟುವಿನ ಫಿಲಿಪ್ ಎಂಬವರಿಗೆ ನಾಯಿ ಕಡಿದಿದ್ದು, ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ – vishwanews24

ಕೊಲ್ಲಬೆಟ್ಟು ಪರಿಸರದಲ್ಲಿ ಹೆಚ್ಚಿನ ಎಲ್ಲಾ ಮನೆಗಳ ನಾಯಿಗಳಿಗೂ ಕೂಡ ಹುಚ್ಚುನಾಯಿ ಕಡಿದು ಬಳಿಕ ಹತ್ತಿರದ ಕಾಡಿಗೆ ಓಡಿಹೋಗಿದೆ. ಅಲ್ಲದೆ ಶಿರ್ವ ಪೊಲೀಸ್ ಸ್ಟೇಷನ್ ಬಳಿ, ಶಿರ್ವಪೇಟೆ ಮತ್ತು ಪದವು ಬಳಿ ಕೂಡ ನಾಗರಿಕರಿಗೆ ಮತ್ತು ನಾಯಿಗಳಿಗೆ ಕಡಿದಿದ್ದು, ನಾಗರಿಕರು ಆತಂಕಕ್ಕೊಳಗಾಗಿದ್ದಾರೆ.

Leave a Reply