ಸಿದ್ದರಾಮಯ್ಯನ ಪಾಪದ ಕೊಡ ಭರ್ತಿಯಾಗಿದೆ, ಇನ್ಯಾವ ಆಟವೂ ನಡೆಯಲ್ಲ : ಶ್ರೀರಾಮುಲು

Featured, ರಾಜ್ಯ ನ್ಯೂಸ್

ಸಿಎಂ ಸಿದ್ದರಾಮಯ್ಯ ಅವರ ಪಾಪದ ಮೂಟೆ ತುಂಬಿದೆ.  ಅವರು ಎಲ್ಲಿ ಹೋಗುತ್ತಾರೋ ಅದಕ್ಕೂ ಮುನ್ನವೇ ಪಾಪದ ಮೂಟೆ ಅಲ್ಲಿಗೆ ಹೋಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಗುಳೇದಗುಡ್ಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿನ್ನ ಸ್ಥಾನವೇ ಗಟ್ಟಿಯಿಲ್ಲ ಎಂದಮೇಲೆ ನೀನು ಹೇಗೆ ಸಿಎಂ ಆಗಲು ಸಾಧ್ಯ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಸಿದ್ದರಾಮಯ್ಯ ಬಾದಾಮಿಗೆ ಬಂದಿದ್ದಾರೆ. ಚಾಮುಂಡೇಶ್ವರಿ ತಾಯಿನೆ ನನ್ನನ್ನು ಗೆಲ್ಲಿಸುತ್ತಾಳೆ. ಸಿದ್ದರಾಮಯ್ಯ ಓರ್ವ ಮುಖ್ಯಮಂತ್ರಿ. ನಾನೊಬ್ಬ ಆರ್ಡಿನರಿ ಕಾರ್ಯಕರ್ತ . ತಮ್ಮ ಆಡಳಿತಾವಧಿಯಲ್ಲಿ ಉತ್ತರಕರ್ನಾಟಕಕ್ಕೆ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಮಾಡಿದ್ದರೆ ಜನ ರೆಡ್ ಕಾರ್ಪ್ ಹಾಕಿ ಕರೆಯುತ್ತಿದ್ದರು ಎಂದಿದ್ದಾರೆ.
ವಾಲ್ಮೀಕಿ ಮತ ಸೆಳೆಯಲು ಜಾರಕಿಹೊಳಿ ಬಾದಾಮಿಯಲ್ಲಿ ಬೀಡು ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಜಾರಕಿಹೊಳಿ ದೊಡ್ಡ ನಾಯಕರು. ನನಗೂ ದೇವರು ಬಲ ಕೊಟ್ಟಿದ್ದಾನೆ.ನನ್ನ ಪರವಾಗಿ ಜನರಿದ್ದಾರೆ ,ಕಾರ್ಯಕರ್ತರಿದ್ದಾರೆ. ಬಾದಾಮಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ,ಮನಸ್ತಾಪವಿಲ್ಲ
ಎಲ್ಲರೂ ಸೇರಿ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ.