ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ನೆಲಮಹಡಿ ಕಟ್ಟಡ ಕುಸಿತ : ಸಾವಿನ ಸಂಖ್ಯೆ 6ಕ್ಕೆ ಏರಿಕೆ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಮಧ್ಯರಾತ್ರಿ ಭಾರೀ ಅನಾಹುತ ಸಂಭವಿಸಿದ್ದು, 2 ಕಟ್ಟಡಗಳ‌ ನೆಲಮಹಡಿ ಕುಸಿದು ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ 7 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಪುಲಿಕೇಶಿನಗರದ ಕೂಕ್​ಟೌನ್ ರಸ್ತೆಯಲ್ಲಿರುವ ನಿರ್ಮಾಣ ಹಂತದ 3 ಅಂತಸ್ತಿನ ಒಂದು ಕಟ್ಟಡ ಹಾಗೂ 4 ಅಂತಸ್ತಿನ ಮತ್ತೊಂದು ಕಟ್ಟಡ ಕುಸಿತವಾಗಿದೆ. ನಿರ್ಮಾಣ ಹಂತದ 3 ಅಂತಸ್ತಿನ ಕಟ್ಟಡ‌ದ ಒಳಗೆ ಕಾರ್ಮಿಕರು ಸಿಲುಕಿದ್ದಾರೆ. ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಇದೇವೇಳೆ ಈ ಕಟ್ಟಡದ ಪಕ್ಕದಲ್ಲಿರುವ 4 ಅಂತಸ್ತಿನ ಮತ್ತೊಂದು ಕಟ್ಟಡವೂ ಕುಸಿದಿದೆ. ಈ ಕಟ್ಟಡದಲ್ಲಿ 3 ಕಾರ್ಮಿಕರು ಸಿಲುಕಿರುವ ಸಾಧ್ಯತೆಯಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿ ನಾರಾಯಣ್, ನಿರ್ಮಲ ಹಾಗೂ ಮಗು ಅನುಷ್ಕಾ ಮೃತಪಟ್ಟಿದ್ದಾರೆ. ಇದುವರೆಗೂ ನಾಲ್ಕು ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಾಳುಗಳನ್ನು ರಕ್ಷಣೆ ಮಾಡಲಾಗಿದೆ. ಮೃತಪಟ್ಟವರನ್ನು ನಾರಾಯಣ(26), ನಿರ್ಮಲ (20) ಮಗು ಅನುಷ್ಕಾ (3) ಶಂಭು ಕುಮಾರ್ (27) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಉತ್ತಮ್, ಸಂತೋಷ್, ಉಮೇಶ್, ಅಮಿರ್, ಬೆತ್ತಾಮ್, ರಾಮ್ ಬಾಲಕ, ಮಂಜುದೇವಿ ಎಂದು ಗುರುತಿಸಲಾಗಿದೆ. ಎನ್.ಡಿ.ಆರ್ ಎಫ್ ಸಿಬ್ಬಂದಿ ಖಗನ್ ಗಾಗಿ ಇನ್ನೂ ಹುಡುಕಾಟ ನಡೆಸುತ್ತಿದ್ಧಾರೆ. ಎಲ್ಲಾ ಗಾಯಾಳುಗಳನ್ನು ಬೋರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.