ಹಿರಿಯ ಯಕ್ಷಗಾನ ವೇಷಧಾರಿ ಮಜ್ಜಿಗೆಬೈಲು ಆನಂದ ಶೆಟ್ಟಿ ನಿಧನ – Vishwanews24

Featured, ಉಡುಪಿ

ಹಿರಿಯ ಯಕ್ಷಗಾನ ವೇಷಧಾರಿ ಮಜ್ಜಿಗೆಬೈಲು ಆನಂದ ಶೆಟ್ಟಿ ನಿಧನ

ಉಡುಪಿ : ಬಡಗುತಿಟ್ಟಿನ ಹಿರಿಯ ವೇಷಧಾರಿಯಾದ ಮಜ್ಜಿಗೆಬೈಲು ಆನಂದ ಶೆಟ್ಟಿ (೭೮ವರ್ಷ) ದಿನಾಂಕ ೧೦-೦೭-೨೦೨೨ ರಂದು ಕುಂದಾಪುರ ತಾಲೂಕಿನ ಯಡಾಡಿಯ ಸ್ವಗೃಹದಲ್ಲಿ ರಾತ್ರಿ ೭.೩೭ಕ್ಕೆ ನಿಧನರಾದರು.

ಪರಂಪರೆಯ ಪ್ರಾತಿನಿಧಿಕ ಪುರುಷ ಮತ್ತು ಎರಡನೆ ವೇಷಧಾರಿಯಾಗಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪೆರ್ಡೂರು, ಮಾರಣಕಟ್ಟೆ, ಸಾಲಿಗ್ರಾಮ, ಗೋಳಿಗರಡಿ ಮತ್ತು ದೀರ್ಘ ಕಾಲ ಮಂದಾರ್ತಿ ಮೇಳದಲ್ಲಿ ಹೀಗೆ ನಾಲ್ಕು ದಶಕಗಳ ಕಲಾಸೇವೆಗೈದ ಸಜ್ಜನ ಕಲಾವಿದರಾಗಿದ್ದರು.

ಯಕ್ಷಗಾನ ಕಲಾರಂಗ ಸಹಿತ ಹಲವಾರು ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಪತ್ನಿ, ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Leave a Reply