ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪನಿ ಜನರಿಗೆ ಮೋಸ ಮಾಡುವಲ್ಲಿ ಶಾಮೀಲು: ದೇವಿಪ್ರಸಾದ್ ಶೆಟ್ಟಿ

Featured, ಜಿಲ್ಲೆ

ಕಾಪು: ಹೆಜಮಾಡಿ ಮತ್ತು ಸಾಸ್ತನ ಟೋಲ್ ಗೇಟ್ ಸಂಬಂಧ ಪಟ್ಟ ವಿಚಾರವಾಗಿ ಇಂದು ಪಡುಬಿದ್ರಿಯ ಖಾಸಾಗಿ ಹೋಟೆಲ್ ನಲ್ಲಿ ಉಭಯ ಜಿಲ್ಲಾ ಟೋಲ್ ಹೋರಾಟ ಸಮಿತಿಯ ಪತ್ರಿಕಾಗೋಷ್ಟಿ ನಡೆಯಿತು.
ಗೋಷ್ಟಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತಾಡಿ” 2010 ರ ಮೂಲ ನಕಾಶೆಯಲ್ಲಿರುವ ಪ್ರಕಾರ ಯಾವುದೇ ರೀತಿಯ ಕಾಮಗಾರಿ ನಡೆಯದೆ ಬಂಡವಾಳಶಾಹಿಗಳ ಕುಮ್ಮಕ್ಕಿಗೆ ಅನುಗುಣವಾಗಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ, ಸರಿಯಾದ ಸರ್ವೀಸ್ ರಸ್ತೆಯೂ ನಿರ್ಮಾಣವಾಗದೇ ವಾಹನ ಸವಾರರಿಗೆ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ ಹಾಗೂ ದಾರಿ ದೀಪದ ನಿರ್ವಹಣೆಯಾಗುತ್ತಿಲ್ಲ, ನವಯುಗ ಕಂಪೆನಿ ನಿರ್ಮಿಸಿರುವ ಬಸ್ಸು ನಿಲ್ದಾಣಗಳು ಗುಜರಿ ಅಂಗಡಿ ಸೇರಿದೆ ಮತ್ತು ಹೆದ್ದಾರಿ ಕಾಮಗಾರಿ ಪೂರ್ಣವಾಗದೆ ಯಾವುದೇ ರೀತಿಯಲ್ಲಿ ನಾವೂ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಒಂದು ವೇಳೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ಪ್ರಜಾಪ್ರಭುತ್ವ ಕಡೆಗಣಿಸಿ ನವಯುಗ ಕಂಪೆನಿಯೊಂದಿಗೆ ಶಾಮೀಲಾದರೆ ಮುಂದಿನ ದಿನ ಉಭಯ ಜಿಲ್ಲೆಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು.

ಸ್ಥಳೀಯ ವಾಹನಗಳಿಗೆ ಯಾವುದೇ ರೀತಿಯ ಟೋಲ್ ಸಂಗ್ರಹಿಸಲು ಬಿಡುವುದಿಲ್ಲ ಸೆ.30ರ ವರೆಗಿನ ಗಡುವು ನೀಡಿದೆ ಮತ್ತು ಸ್ಥಳೀಯ ವಾಹನಗಳ ಸಂಚಾರಕ್ಕೆ ಸರಿಯಾದ ಸರ್ವೀಸ್ ರಸ್ತೆ ನಿರ್ಮಿಸಲಿ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಹೆದ್ದಾರಿಯಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದರೇ ಆ ಜಾಗಕ್ಕೆ ನಮ್ಮ ಕಮಿಟಿಯ ಸದಸ್ಯರು ಅಥವಾ ಸಮಾಜಸೇವಕರು ,ನಾಗರಿಕರು ಭೇಟಿ ನೀಡಿ ನವಯುಗ ಕಂಪೆನಿಯ ವಿರುದ್ಧ ಕೂಡ ದೂರು ದಾಖಲಿಸಲಾಗುವುದು ಎಂದು ಹೇಳಿದರು.

ಕಾಪು ದಿವಾಕರ್ ಶೆಟ್ಟಿ ಮಾತಾಡಿ” ಹೆದ್ದಾರಿ ಪ್ರಾಧಿಕಾರ ಜನರನ್ನ ಕತ್ತಲೆಯಲ್ಲಿಟ್ಟು ನವಯುಗ ಕಂಪೆನಿಗೆ ಬೆಂಬಲ ನೀಡುತ್ತಿದೆ ಇದು ಪ್ರಜಾಪ್ರಭುತ್ವ ಕಗ್ಗೊಲೆ, ಕುಂದಾಪುರದಿಂದ ಮಂಗಳೂರು ಸಂಚಾರಕ್ಕೆ ಮೂರು ಕಡೆ ಟೋಲ್ ನೀಡುವುದಾದರು ಯಾವ ನ್ಯಾಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ದಿನನಿತ್ಯ ಜನ ತೊಂದರೆಯಾಗುತ್ತಿದೆ ಅದರ ಮಧ್ಯೆ ಟೋಲ್ ಸಂಗ್ರಹ ಖಂಡನಾರ್ಹ ಎಂದರು.

ಪ್ಲಾನ್ ನಡೆಸದೆ ಹೆಜಮಾಡಿಯಲ್ಲಿ ಟೋಲ್ ಗೇಟ್ ನಿರ್ಮಿಸಿದೆ 250 ಮೀಟರ್ ದೂರದಲ್ಲಿ ಮತ್ತೊಂದು ಟೋಲ್ ಗೂಡು ನಿರ್ಮಿಸಿ ಮೂರ್ಖತನ ಪ್ರದರ್ಶಿಸಿದ ಕಂಪೆನಿ ಇನ್ನು ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಸಲು ಹೇಗೆ ಸಾದ್ಯವೆಂದು ಪಡುಬಿದ್ರಿ ನವೀನ್ಚಂದ್ರ ಶೆಟ್ಟಿ ಲೇವಡಿ ಮಾಡಿದರು.

ಪಾದೆಬೆಟ್ಟು ಪ್ರಕಾಶ್ ಶೆಟ್ಟಿ, ಮಿಥುನ್ ಹೆಗ್ಡೆ,ಗುಲಾಮ್ ಅಹಮ್ಮದ್, ಮಧುಚಂದ್ರ ಆಚಾರ್ಯ ಸೇರಿದಂತೆ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.