BREAKING NEWS – ಬಿಜೆಪಿ ಗೆ ಬೆಂಬಲ ನೀಡಿದ ಸುಮಲತಾ – vishwanews24
ಬಿಜೆಪಿ ಗೆ ಬೆಂಬಲ ನೀಡಿದ ಸುಮಲತಾ
ಮಂಡ್ಯದ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲ ಘೋಷಿಸಿದ ಸುಮಲತಾ
ಮಂಡ್ಯ : ಇಂದಿನಿಂದ ನನ್ನ ಸಂಪೂರ್ಣವಾದ ಬೆಂಬಲ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಮಾಡುವೆ ಎನ್ನುವ ಮೂಲಕ ಇಂದು ಸಂಸದೆ ಸುಮಲತಾ ಅಂಬರೀಷ್ ಅಧಿಕೃತವಾಗಿ ಬಿಜೆಪಿ (BJP) ಪಕ್ಷಕ್ಕೆ ಸೇರ್ಪಡೆ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.
ಅಂಬರೀಷ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಸುಮಲತಾ ಅಂಬರೀಷ್ ಸುದ್ದಿಗೋಷ್ಟಿ ಆರಂಭಿಸಿದ್ದಾರೆ.
ಮಂಡ್ಯ ಚಾಮುಂಡೇಶ್ವರಿ ನಗರದ ಸುಮಲತಾ ಅಂಬರೀಷ್ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಸುಮಲತಾ ಅಂಬರೀಷ್ ಮಾತನಾಡಿದ ‘ ನಾನು ರಾಜಕೀಯಕ್ಕೆ ಪ್ರವೇಶಿಸಿ ನಾಲ್ಕು ವರ್ಷ ಆಗಿದೆ. ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ರಾಜಕೀಯಕ್ಕೆ ಬಣದಿದ್ದೇನೆ. ಸಮಿಶ್ರ ಸರ್ಕಾರ ವೇಲೆ ಮುಖ್ಯಮಂತ್ರಿ ಪುತ್ರನನ್ನು ಎದುರಿಸಿ ನಿಂತಿದ್ದು ನನ್ನ ಸ್ವಾರ್ಥ ಅಲ್ಲ.ಎಲ್ಲದನ್ನು ಪಣಕ್ಕಿಟ್ಟು ನಾನು ಮುಂದೆ ಬಂದಿದ್ದೇನೆ. ಅಂದು ನನ್ನ ಬೆಂಬಲಕ್ಕೆ ನಿಂತಿದ್ದು ಅಂಬಿ ಅಪ್ತರು. ಜನ ನನ್ನನ್ನು ಪ್ರೀತಿಸುತ್ತಾರೆ ಅಶೀರ್ವಾದಿಸುತ್ತಾರೆ.
ಅಭಿಷೇಕ್ ಅಂಬರೀಷ್ ರಾಜಕಾರಣಕ್ಕೆ ಬರುವುದಿಲ್ಲ . ಕುಟುಂಬ ರಾಜಕಾರಣ ಮಾಡೋದಿಲ್ಲ, ಈ ವರ್ಷ ಅಭಿಷೇಕ್ ಮದುವೆ ಆಗುತ್ತಾನೆ. ಸಿನಿಮಾ ಮಾಡುತ್ತಾನೆ ಎಂದು ತಮ್ಮ ಮಗ ಅಭಿಷೇಕ್ ಅಂಬರೀಷ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
