Category: ದಕ್ಷಿಣ ಕನ್ನಡ
ಮಂಗಳೂರು: ಪಂಪ್ವೆಲ್ ಮೇಲ್ಸೇತುವೆ ಪೂರ್ಣಗೊಳಿಸಲು ಕಾರಣ ಜಿಲ್ಲಾಡಳಿತ : ಐವನ್ ಡಿಸೋಜಾ -Vishwanews24
ಮಂಗಳೂರು,: ನಗರದ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಹಲವು ವರ್ಷಗಳಿಂದ ಕೇಳುತ್ತಿದ್ದೆವು. ಆದರೆ ಸಂಸದರು ಕೈಚೆಲ್ಲಿದರು. ಬಳಿಕ ಇದೀಗ ಜಿಲ್ಲಾಡಳಿತದಿಂದಲೇ ಈ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ. ದ.ಕ. […]
ಇಂದು ಮಂಗಳೂರಿನಲ್ಲಿ ಸಿಎಎ ಪರ ಬೃಹತ್ ಜನಜಾಗೃತಿ ಸಮಾವೇಶ -Vishwanews24
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಭಾರತೀಯ ಜನತಾ ಪಕ್ಷವು ಇಂದು ಮಂಗಳೂರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಬಿಜೆಪಿ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ದೇಶಾದ್ಯಂತ […]
ಮಂಗಳೂರು: ಜೆಡಿಎಸ್ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ -Vishwanews24
ಮಂಗಳೂರು: ಮಾಜಿ ಸಚಿವ,ಜೆಡಿಎಸ್ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ(80) ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ. ಅಮರನಾಥ ಶೆಟ್ಟಿ ಅವರು ಕರಾವಳಿಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು 10 ಬಾರಿ ಚುನಾವಣೆಯಲ್ಲಿ […]
ಮಂಗಳೂರು: ಜ. 27ರಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಂಗಳೂರಿಗೆ -Vishwanews24
ಮಂಗಳೂರು,: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ಮಂಗಳೂರಿನಲ್ಲಿ ನಡೆಯಲಿರುವ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ರವರು ಜ.೨೭ ರಂದು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 3.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಕೇಂದ್ರ […]
ಮಂಗಳೂರು : ಪ್ರಯಾಣಿಕರ ವಾಹನಗಳ ಓಡಾಟಕ್ಕೆ ಸಿದ್ಧವಾಗಲಿದೆ ಪಂಪ್ವೆಲ್ ಮೇಲ್ಸೇತುವೆ -Vishwanews24
ಮಂಗಳೂರು: ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ ನವಯುಗ ಕಂಪೆನಿ ವಹಿಸಿಕೊಂಡು ಕಳೆದ 10 ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದರೂ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಪಂಪ್ ವೆಲ್ ಕಾಮಗಾರಿ ಜನವರಿ ತಿಂಗಳಾಂತ್ಯದ ಮುಗಿಯುವಂತೆ ಕಾಣುತ್ತದೆ. ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೇಲ್ಸೇತುವೆ […]
ಕುಂದಾಪುರ : ಬೈಕ್ ಡಿಕ್ಕಿ , ಪಾದಚಾರಿ ಮಹಿಳೆ ಸಾವು -Vishwanews24
ಕುಂದಾಪುರ : ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರದ ಎದುರು ಶುಕ್ರವಾರ ನಡೆದಿದೆ. ಮೃತ ವೃದ್ಧೆಯನ್ನು ಸ್ಥಳೀಯ ನಿವಾಸಿ ವಿನಯ ಕಾಮತ್(62) ಎಂದು ಹಾಗೂ ಡಿಕ್ಕಿ […]
ಬೆಳ್ತಂಗಡಿ: ಮಾರಕಾಸ್ತ್ರದಿಂದ ಕಡಿದು ಬರ್ಬರ ಹತ್ಯೆ -Vishwanews24
ಬೆಳ್ತಂಗಡಿ: ಗುರುವಾಯನಕೆರೆ ಸಮೀಪ ನಾರಾವಿ ರಸ್ತೆಯ ಪೊಟ್ಟುಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ ರಮೇಶ್ ಯಾನೆ ನಾರಾಯಣ ಪಡಂಗಡಿ ಪೊಯ್ಯಗುಡ್ಡೆ (40) ಎಂಬವರನ್ನು ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ. ಗುರುವಾಯನಕೆರೆ ನಿವಾಸಿ ಅಣ್ಣು ಕೊಲೆ ಆರೋಪಿ ಎಂದು ಹೇಳಲಾಗುತ್ತಿದ್ದು, ಪೊಲೀಸರು ಈತನನ್ನು ಬಂಧಿಸಿರುವುದಾಗಿ […]
ಮಂಗಳೂರು ಬಾಂಬ್ ಪ್ರಕರಣ : ಆತ ಆದಿತ್ಯ ಆಗದೆ ಅಬ್ದುಲ್ ಆಗಿದ್ದರೆ ಬಿಜೆಪಿ ಇಷ್ಟೋತ್ತಿಗೆ ಗಲಭೆ ಎಬ್ಬಿಸಿ ಭಾರತ್ ಬಂದ್ ಗೆ ಕರೆ ಕೊಟ್ಟಾಗಿರುತ್ತಿತ್ತು : ಕಿಮ್ಮನೆ ರತ್ನಾಕರ್ -Vishwanews24
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಇಟ್ಟು ಸಿಕ್ಕಿ ಬಿದ್ದಿರುವ ವ್ಯಕ್ತಿಯ ಹೆಸರು ಆದಿತ್ಯ ಆಗಿದ್ದಕ್ಕೆ ಬಚಾವ್, ಒಂದು […]
ದೇವಳಗಳಲ್ಲಿ ವಸ್ತ್ರಸಂಹಿತೆ ಅಳವಡಿಸುವ ಬಗ್ಗೆ ಶೀಘ್ರ ತೀರ್ಮಾನ : ಕೋಟ ಶ್ರೀನಿವಾಸ ಪೂಜಾರಿ -Vishwanews24
ಸುಬ್ರಹ್ಮಣ್ಯ: ರಾಜ್ಯ ಮುಜರಾಯಿ ಇಲಾಖೆ ಅಧೀನದ ದೇವಳಗಳಲ್ಲಿ ವಸ್ತ್ರಸಂಹಿತೆ ಅಳವಡಿಸುವ ಬಗ್ಗೆ ಅನೇಕ ಸಂಘಟನೆಗಳ ಕಾರ್ಯಕರ್ತರು ಮನವಿ ನೀಡುತ್ತಿದ್ದಾರೆ. ದೇವಳಗಳ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ […]
ಕಟೀಲು: ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು : ಯಧುವೀರ್ ಒಡೆಯರ್ -Vishwanews24
ಕಟೀಲು: ಧಾರ್ಮಿಕ ಆಚಾರ ವಿಚಾರ ಪರಿಸರ ಕಾಳಜಿಗಳು ದೇವಸ್ಥಾನಗಳಿಂದ ಪ್ರಾರಂಭವಾಗಬೇಕು ಎಂದು ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು. ಅವರು ಕಟೀಲು ಬ್ರಹ್ಮಕಲಶೋತ್ಸವ ದ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡದ […]
