ಸ್ವಪ್ರಯತ್ನದಿಂದ ದೊಡ್ಡ ದೊಡ್ಡ ಸಂಖ್ಯೆಗಳನ್ನು ಕೂಡಿಸಿ, ಗುಣಿಸಿ, ಭಾಗಿಸಿ ಸೆಕೆಂಡುಗಳಲ್ಲಿ ಉತ್ತರಿಸುವ ೧೧ ವರ್ಷದ ಶ್ರೀನಿಧಿ ; ಈತನಿಗೆ ಜಗತ್ತಿನ ಅತಿ ವೇಗದ ಮಾನವ ಕ್ಯಾಲ್ಕುಲೇಟರ್‌ ಹಾಗೂ ಪ್ರಸಿದ್ಧ ಗಣಿತಜ್ಞನಾಗುವ ಆಸೆ..

ಉಡುಪಿ: ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಆರನೇಯ ತರಗತಿ ಓದುತ್ತಿರುವ ಈ ಪೋರನ ಹೆಸರು ಶ್ರೀನಿಧಿ ನೀರಮಾನ್ವಿ ..ವಯಸ್ಸು 11.  ಹತ್ತು ಅಂಕಿಗಳನ್ನು ಹತ್ತು ಸಾಲುಗಳಲ್ಲಿ ಕೂಡಿಸಲು ಹೇಳಿದರೆ 25 ಸೆಕಂಡುಗಳಲ್ಲಿ ಮುಗಿಸಬಲ್ಲ. ಇದರ ವಿಶ್ವ ದಾಖಲೆ 10 ಸೆಕೆಂಡು. ಎಂಟು ಅಂಕಿಗಳನ್ನು […]

ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ : 5 ಆರೋಪಿಗಳ ಬಂಧನ

ಪಡುಬಿದ್ರಿ,: ಸೆಪ್ಟೆಂಬರ್ ೨ರಂದು ಪಡುಬಿದ್ರಿ ಕೆಳಗಿನ ಪೇಟೆಯಲ್ಲಿರುವ ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸಮೀಪದಲ್ಲಿದ್ದ ಚಿನ್ನದ ಅಂಗಡಿ ಹಾಗೂ ಮೊಬೈಲ್ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ಕಳವು ಮಾಡಿದ 5 ಜನ ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಮಹಾರಾಷ್ಟ್ರದಲ್ಲಿ ಭಾನುವಾರ […]

ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ‘ಕ್ಷಿಪ್ರ ಕಾರ್ಯಪಡೆ ನೆಲೆ’ ; ಹಿಂಸಾಚಾರ ಮತ್ತು ಗುಂಪು ಘರ್ಷಣೆಗಳನ್ನು ನಿಯಂತ್ರಣ ಮಾಡಲು ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ, : ಕರ್ನಾಟಕದ ಮಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಹೊಸದಾಗಿ ಕ್ಷಿಪ್ರ ಕಾರ್ಯಪಡೆ ನೆಲೆಗಳು ಸ್ಥಾಪನೆಯಾಗಲಿವೆ. ಕೇಂದ್ರ ಸರ್ಕಾರವು ಕಳೆದ ಜನವರಿಯಲ್ಲಿಯೇ ಆರ್ ಎ ಎಫ್ ನ ಐದು ಹೊಸ ಬೆಟಾಲಿಯನ್ ಗಳಿಗೆ ಅನುಮೋದನೆ ನೀಡಿತ್ತು. ಕೋಮುಗಲಭೆ ಸೇರಿದಂತೆ ಕಾನೂನು ಸುವ್ಯವಸ್ಥೆ […]

ಸ್ಮಾರ್ಟ್ ಸಿಟಿಯ ಅನುದಾನ ಕಸಾಯಿಖಾನೆಗೆ ; ಸಚಿವ ಖಾದರ್ ವಿರುದ್ಧ ಹೋರಾಟಕ್ಕೆ ಮುಂದಾದ ಬಿಜೆಪಿ

ಉಡುಪಿ : ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸ್ಮಾರ್ಟ್ ಸಿಟಿಯ ಅನುದಾನವನ್ನು ಕಸಾಯಿಖಾನೆಗೆ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಖಾದರ್ ಈ ಬಗ್ಗೆ ಸ್ಪಷ್ಟನೆ ನೀಡದಿದ್ದಲ್ಲಿ ಮೂರು ಜಿಲ್ಲೆಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಕಾರ್ಕಳ ಶಾಸಕ ಸುನಿಲ್ […]

ಲೋಕಸಭೆಗೆ ಉಪ ಚುನಾವಣೆ ಹಿನ್ನೆಲೆ, ಉಡುಪಿಯಲ್ಲೂ ಮಾದರಿ ಚುನಾವಣಾ ನೀತಿ ಸಂಹಿತೆ-ಡಿಸಿ ಪ್ರೀಯಾಂಕ

ಉಡುಪಿ, : ಭಾರತ ಚುನಾವಣಾ ಆಯೋಗ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಉಪ ಚುನಾವಣೆ ಘೋಷಣೆ ಮಾಡಿದೆ. ಅದರಂತೆ ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಒಳಪಡುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ನವೆಂಬರ್ ೦3 ರಂದು ಮತದಾನ ನಡೆಯಲಿದೆ. […]

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ವಿವರ ಕಡ್ಡಾಯವಾಗಿ ನಮೂದಿಸಿ : ಉಡುಪಿ ಡಿಸಿ

ಉಡುಪಿ, : ಜಿಲ್ಲೆಯ ಎಲ್ಲಾ ಖಾಸಗಿ ಅಸ್ಪತ್ರೆಗಳು ತಮ್ಮಲ್ಲಿ ನೀಡುವ ಚಿಕಿತ್ಸೆಯ ದರಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಪರಿಶೀಲನಾ ಸಭೆಯಲ್ಲಿ […]

ಟೋಲ್‌ ವಿರುದ್ಧ ಪ್ರತಿಭಟನೆಗೆ ಬೆಂಬಲ

ಬೆಳ್ಮಣ್: ಸಮ್ಮಿಶ್ರ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಪ್ರಸ್ತುತ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಂದ ಟೋಲ್ ವಸೂಲಿ ಮಾಡಿ ಖಜಾನೆ ಭರ್ತಿ ಮಾಡುವ ಉದ್ದೇಶ ಹೊಂದಿದೆ ಎಂದು ಕಾರ್ಕಳ ಶಾಸಕ ಸುನೀಲ್‌ಕುಮಾರ್ ಆರೋಪಿಸಿದ್ದಾರೆ. ಬೆಳ್ಮಣ್‌ನಲ್ಲಿ ನಿರ್ಮಾಣಗೊಳ್ಳಲಿರುವ ಟೋಲ್‌ಗೇಟ್ ವಿರುದ್ಧ ಶುಕ್ರವಾರ ಬೆಳ್ಮಣ್ ಪೇಟೆಯಲ್ಲಿ ಬಿಜೆಪಿ […]

ಕಾಪುವಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ವರ್ಗಾವಣೆ,ಮಹೇಶ್ ಪ್ರಸಾದ್ ನೇಮಕ.

ಕಾಪುವಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ವರ್ಗಾವಣೆ,ಮಹೇಶ್ ಪ್ರಸಾದ್ ನೇಮಕ. ಕಾಪು: ಕಾಪುವಿನ ಈ ಹಿಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ಅವರಿಗೆ ಏಕಾಏಕಿ ವರ್ಗಾವಣೆಯಾಗಿ ಆ ಹುದ್ದೆಗೆ ಸೂಪರ್ ಕಾಪ್ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇಮಕವಾಗಿದ್ದಾರೆ. ಪುತ್ತೂರು […]

ಕರಾವಳಿಯಲ್ಲಿ ಮತ್ತೆ 3 ದಿನ ಭಾರೀ ಮಳೆಯಾಗುವ ಸೂಚನೆ..; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ

ಮಂಗಳೂರು: ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಭಾಗಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಉತ್ತಮ‌ ಮಳೆಯಾಗಲಿದೆ. ಇಂದು ರಾತ್ರಿ ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ. ರಾಜ್ಯ ರಾಜಧಾನಿಯ […]

ಉಡುಪಿ ಎಸ್‍ಪಿ ವರ್ಗಾವಣೆ ಮಾಡಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ; ಎಚ್ಚರಿಕೆ ನೀಡಿದ ಶ್ರೀನಿವಾಸ್ ಪೂಜಾರಿ

ಉಡುಪಿ: ಕಾಂಗ್ರೆಸ್ ರಾಜಕೀಯ ಒತ್ತಡ ಬಳಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿಯವರನ್ನು ವರ್ಗಾವಣೆ ಮಾಡಲು ಯತ್ನಸುತ್ತಿದ್ದು, ಒಂದು ವೇಳೆ ಎಸ್‍ಪಿ ಅವರನ್ನು ವರ್ಗಾವಣೆ ಮಾಡಿದರೆ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತೇವೆ ಎಂದು ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. […]