ಉಚ್ಚಿಲ : ಮಹಾಲಕ್ಷ್ಮೀ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ನೆರವು : ಸಿಎಂ ಘೋಷಣೆ – Vishwanews24

Featured, ಉಡುಪಿ

ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಘೋಷಣೆ..

ಮೀನುಗಾರರಿಗೆ 10 ತಿಂಗಳಿಗೆ ಎರಡು ಲಕ್ಷ ಲೀ. ಸಬ್ಸಿಡಿ ಡೀಸೆಲ್..

ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಣೆ..

ಎಲ್ಲ ಬಂದರಿನ ಡಬ್ಬಿಂಗ್ ( ಹೂಳೆತ್ತುವ) ಕೆಲಸ ಮಾಡುತ್ತೇವೆ..

ನಾನು ಮೊಗವೀರ ಸಮುದಾಯದ ಜೊತೆ ಸದಾ ಇದ್ದೇನೆ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮುಖ್ಯಮಂತ್ರಿ

ಉಚ್ಚಿಲ : ಕಾಪು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶಪುಣ್ಯೋತ್ಸವ ನಡೆಯುತ್ತಿದ್ದು, ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮೊದಲಿಗೆ ಕ್ಷೇತ್ರದೊಳಗೆ ಆಗಮಿಸಿ ಶ್ರೀ ದೇವಿ ದರುಶನ ಪಡೆದುಕೊಂಡ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಅವರು ‘ಮಹಾಲಕ್ಷ್ಮೀ ಹೆಸರಿನಲ್ಲಿಯೇ ಶಕ್ತಿ ಇದೆ. ಮಹಾಲಕ್ಷ್ಮೀ ಕೃಪೆ ಆದವರು ಬದುಕಿನಲ್ಲಿ ಅತ್ಯಂತ ಯಶಸ್ವಿ ಆಗುತ್ತಾರೆ’ ಎಂದರು.

ಸಾಹಸ ಅನ್ನುವುದು ಕರಾವಳಿ ಜನರ ಗುಣಧರ್ಮ ಆಗಿದೆ. ಮೊಗವೀರರದ್ದು ಸಾಹಸವೇ ಗುಣಧರ್ಮವಾಗಿದೆ. ಮೊಗವೀರರು ಕಠಿಣಪರಿಶ್ರಮಿಗಳು ಎಂದರು.

ಜನತಾದಳ ಪಕ್ಷದ, ಕಾಪು ವಿಧಾನಸಭಾ ಕ್ಷೇತ್ರದ “ದಕ್ಷಿಣ  ವಿಭಾಗದ ಅಧ್ಯಕ್ಷ”ರಾಗಿ  ಶ್ರೀ ಭರತ್ ಕುಮಾರ್ ಶೆಟ್ಟಿ ಆಯ್ಕೆ -Vishwanews24

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ,ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಘೋಷಣೆ ಮಾಡಿದರು.  ಮೂರು ಜಿಲ್ಲೆಗಳಿಗೆ 5 ಸಾವಿರ ಮನೆ ನೀಡುತ್ತೇವೆ. ಎಲ್ಲ ಬಂದರಿನ ಡಬ್ಬಿಂಗ್ ( ಹೂಳೆತ್ತುವ) ಕೆಲಸ ಮಾಡುತ್ತೇವೆ. ಮಹಾಲಕ್ಷ್ಮಿ ದೇವಸ್ತಾನಕ್ಕೆ 5 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು. ಹಾಗೆಯೇ ಮೊಗವೀರ ಮಕ್ಕಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು. ಮೀನುಗಾರರಿಗೆ 10 ತಿಂಗಳಿಗೆ ಎರಡು ಲಕ್ಷ ಲೀ. ಸಬ್ಸಿಡಿ ಡೀಸೆಲ್ ನೀಡುತ್ತೇವೆ. ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿಯೂ ಘೋಷಿಸಿದರು. ದುಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎಂದ ಅವರು , ಮೀನುಗಾರರಿಗೆ ನನ್ನ ಮನೆ ಮತ್ತು ಮನಸ್ಸಿನ ಬಾಗಿಲು ಸದಾ ತೆರೆದಿರುತ್ತದೆ. ನಾನು ಮೊಗವೀರ ಸಮುದಾಯದ ಜೊತೆ ಸದಾ ಇದ್ದೇನೆ ಎಂದು ಸಭಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ವಾಹನ ಅಪಘಾತ : ಸಂಸದ ಸಂಗಣ್ಣ ಕರಡಿ ಅವರ ಸಹೋದರ ಸ್ಥಳದಲ್ಲಿಯೇ ಸಾವು – Vishwanews24

ಸಭೆಯಲ್ಲಿ ಸಂಸ್ಕೃತಿ ಸಚಿವ ವಿ ಸುನಿಲ್‌ ಕುಮಾರ್, ಸಾರಿಗೆ ಸಚಿವ ಶ್ರೀರಾಮುಲು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್‌, ಸುಕುಮಾರ್ ಶೆಟ್ಟಿ, ರಘುಪತಿ ಭಟ್,ಲಾಲಾಜಿ ಮೆಂಡನ್‌, ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮೊದಲಾದವರಿದ್ದರು. ನಾಡೋಜ ಜಿ ಶಂಕರ್ ಸರ್ವರನ್ನು ಸ್ವಾಗತಿಸಿ ತಮ್ಮ ಹತ್ತುಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಮೊಗವೀರರಿಗಾಗಿ ಹಾಸ್ಟೆಲ್‌ ಸೌಕರ್ಯ ಮಾಡಿಸಲು ಮುಂದಾಗಬೇಕು ಎಂದರು.

ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡುವುದಿಲ್ಲ : ಎಸ್.ಟಿ.ಸೋಮಶೇಖರ್ – Vishwanews24

Leave a Reply