ಉಡುಪಿ: ಯುವತಿ ನಾಪತ್ತೆ – Vishwanews24
ಉಡುಪಿ: ಯುವತಿ ನಾಪತ್ತೆ
ಉಡುಪಿ: ನಗರದ ನಿಟ್ಟೂರು ಬಾಳಿಗಾ ಫಿಶ್ನೆಟ್ನಲ್ಲಿ ಕೆಲಸ ಮಾಡಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕು ಶಿಳ್ಕೆ ನಿವಾಸಿ ಮಾಲತಿ ಗೋಪಾಲ ಗೌಡ (23) ಎಂಬ ಯುವತಿಯು ಸುಮಾರು ಒಂದು ತಿಂಗಳ ಹಿಂದೆ ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಸಪೂರ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ
ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೇವತಾ ದರ್ಶನದಿಂದ ಮನೋಬಲವೃದ್ಧಿ : ನೋಡಿ ಇಂದಿನ ದಿನ ಭವಿಷ್ಯ -Vishwanews24
